ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಮತದಾರರ ಜಾಗೃತಿ ಅಭಿಯಾನದ ಅಂಗವಾಗಿ ಬೆಳಗಾವಿ ವೋಟ್ಸ್ 100 % ಸಹಯೋಗದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯು ಶುಕ್ರವಾರ ಮುಂಜಾನೆ 6.30ಕ್ಕೆ ಬೆಳಗಾವಿಯ ಸಿಪಿಎಡ್ ಮೈದಾನದಿಂದ ವಾಕ್ಥಾನ್ ಕಾರ್ಯಕ್ರಮಹಮ್ಮಿಕೊಂಡಿದೆ.
ವಾಕ್ಥಾನ್ ಸಿಪಿಎಡ್ ಮೈದಾನದಿಂದ ಪ್ರಾರಂಭವಾಗಿ ವೆಂರ್ಗುರ್ಲಾ ರಸ್ತೆ, ಹನುಮಾನ ನಗರ, ಜಾಧವ ನಗರ ಮಾರ್ಗವಾಗಿ ಸಂಚರಿಸಿ ಸಿಪಿಎಡ್ ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ.
ವಾಕ್ ಥಾನ್ ಯಶಸ್ವಿಗೊಳಿಸುವ ಹಿನ್ನೆಲೆಯಲ್ಲಿ ಬೆಳಗಾವಿ ವೋಟ್ಸ್ 100 % ಸದಸ್ಯರು ಗುರುವಾರ ಸಂಜೆ ಸಭೆ ಸೇರಿ ಪೂರ್ವ ಸಿದ್ಧತೆ ಕುರಿತು ಚರ್ಚಿಸಿದರು.
ವಾಕ್ ಥಾನ್ ಗೆ ಆನ್ ಲೈನ್ ನಲ್ಲಿ 600 ಕ್ಕೂ ಹೆಚ್ಚು ಜನರು ನೊಂದಣಿ ಮಾಡಿಕೊಂಡಿದ್ದು, ಶೇ.30ರಷ್ಟು ಮಹಿಳೆಯರೂ ನೊಂದಾಯಿಸಿದ್ದಾರೆ ಎಂದು ಚೈತನ್ಯ ಕುಲಕರ್ಣಿ ತಿಳಿಸಿದರು.
ಇಂದು ಮಧ್ಯಾಹ್ನ 2 ಗಂಟೆಗೆ ಆನ್ ಲೈನ್ ನೊಂದಣಿ ಬಂದ್ ಮಾಡಲಾಗಿದ್ದು, ನೇರವಾಗಿ ಬಂದು ವಾಕ್ ಥಾನ್ ನಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು.
ಸಚಿನ್ ಸಬ್ನಿಸ್, ದಿಲೀಪ್ ಚಂಡಕ್, ಕಿರಣ ನಿಪ್ಪಾಣಿಕರ್, ರೋಹಿತ್ ದೇಶಪಾಂಡೆ, ಬಸವರಾಜ ವಿಭೂತಿ, ಎಂ.ಕೆ.ಹೆಗಡೆ, ಸತೀಶ್ ಕುಲಕರ್ಣಿ, ಆನಂದ ಬುಕ್ಕೆಬಾಗ, ಅಜಯ ಹೆಡಾ, ರಾಮಲಿಂಗ್, ಮಹಾದೇವ ಮೊದಲಾದವರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ