Latest

ಮಹಿಳಾ ಕಾನೂನು ದುರ್ಬಳಕೆಯಾಗದಿರಲಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ನಿಯತಿ ಫೌಂಡೇಶನ್ ಆಶ್ರಯದಲ್ಲಿ ಹೋಮ್ ಮಿನಿಸ್ಟರ್ ಸೀಸನ್ 2 ಕಾರ್ಯಕ್ರಮ ಜಾಲಗಾರ ಗಲ್ಲಿ ಮಾರುತಿ ಮಂದಿರದಲ್ಲಿ ಕಾಳಿಕಾದೇವಿ ದೈವಜ್ಞ ಮಹಿಳಾ ಮಂಡಳದ ಆಶ್ರಯದಲ್ಲಿ ನಡೆಯಿತು. 

ನ್ಯಾಯವಾದಿ ಭಾಸ್ಕರ್ ಪಾಟೀಲ ಮಾತನಾಡಿ, ಮಹಿಳೆಯರು ಶಿಕ್ಷಣ ಹಾಗೂ ಕಾನೂನನ್ನು ತಿಳಿದುಕೊಳ್ಳಬೇಕು. ಬಹಳಷ್ಟು ಕಾನೂನುಗಳು ಮಹಿಳೆಯರ ಪರವಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಆದರೆ ಯಾವುದೇ ಕಾರಣದಿಂದ ದುರ್ಬಳಕೆಯಾಗದಂತೆ ನೋಡಿಕೊಳ್ಳಬೇಕೆಂದರು.

Home add -Advt

ನಿಯತಿಫೌಂಡೇಶನ್ ಅಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್, ಮಹಿಳೆಯರು ತಮ್ಮನ್ನು ತಾವು ಹೊರಜಗತ್ತಿಗೆ ಒಡ್ಡಿಕೊಳ್ಳಬೇಕು. ಅವಕಶಗಳನ್ನು ಸದ್ಭಳಕೆ ಮಾಡಿಕೊಳ್ಳಲು ಯಾರ ಮೇಲೂ ಅವಲಂಭಿಸುವ ಅವಶ್ಯಕತೆ ಇಲ್ಲ ಎಂದರು.

ಶರವರಿ ನಂದ್ಯಾಳ್ಕರ್ ಹೋಮ್ ಮಿನಿಸ್ಟರ್ ಆಗಿ ಆಯ್ಕೆಯಾದರು. ಶೃತಿ ಪೋತದಾರ್ ಗೆ ಬೆಸ್ಟ್ ಡ್ರೆಸ್ ಅವಾರ್ಡ್, ರೇಣುಕಾ ಕಾರೇಕರ್ ಗೆ ಬೆಸ್ಟ್ ಹೇರ್ ಸ್ಟೈಲ್ ಅವಾರ್ಡ್ ನೀಡಲಾಯಿತು. 

ಡಾ.ಸಮೀರ್ ಸರ್ನೋಬತ್, ರಾಜಶ್ರೀ ಜಾಧವ, ಮೋನಲ್ ಶಹಾ, ಪ್ರಜ್ಞಾ ಕಾಪ್ಸೆ, ಸೀಮಾ ಸೊಲ್ಲಾಪುರೆ ಮೊದಲಾದವರಿದ್ದರು. 

Related Articles

Back to top button