Latest

ಮೂಡಲಗಿ: 28 ರಂದು ಬಸವೇಶ್ವರ ಸೊಸೈಟಿ ಚುನಾವಣೆ, 12 ಸ್ಥಾನಗಳಿಗೆ 22 ಅಭ್ಯರ್ಥಿಗಳು ಕಣದಲ್ಲಿ

   ಪ್ರಗತಿವಾಹಿನಿ ಸುದ್ದಿ, ಮೂಡಲಗಿ

ಸ್ಥಳಿಯ ಪ್ರತಿಷ್ಠಿತ ಶ್ರೀ ಬಸವೇಶ್ವರ ಅರ್ಬನ್ ಕೊ-ಆಪ್ ಕ್ರೆಡಿಟ ಸೊಸೈಟಿಯ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಗೆ ಜ.28ರಂದು ಚುನಾವಣೆ ನಡೆಯಲಿದೆ.
ಮಂಗಳವಾರ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿತ್ತು. ಒಟ್ಟು 12 ಸ್ಥಾನಗಳಿಗೆ 22 ಅಭ್ಯರ್ಥಿಗಳು ಅಂತಿಮ ಕಣದಲ್ಲಿಉಳಿದಿದ್ದಾರೆ. ಪರಿಶಿಷ್ಟ ಪಂಗಡದ ಒಂದು ಸ್ಥಾನ ಖಾಲಿ ಇದೆ ಎಂದು ಬೈಲಹೊಂಗಲ ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ಹಾಗೂ ಚುನಾವಣಾ ಅಧಿಕಾರಿಯೂ ಆದ ಎನ್.ಎನ್ ಸರಾಫ್ ತಿಳಿಸಿದ್ದಾರೆ.
ಚುನಾವಣೆಗೆ ಸಾಮಾನ್ಯ -7 ಸ್ಥಾನಗಳಿಗೆ 13, ಮಹಿಳಾ-2 ಸ್ಥಾನಗಳಿಗೆ 3, ಹಿಂದುಳಿದ ವರ್ಗ ಅ-2ಸ್ಥಾನಗಳಿಗೆ 4, ಪರಿಶಿಷ್ಟ ಜಾತಿ 1 ಸ್ಥಾನಕ್ಕೆ 2 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
ಸಾಮಾನ್ಯ ವರ್ಗದಿಂದ- ಮೇಲಪ್ಪ ಬಸಪ್ರಭು ಅಂಗಡಿ, ಈರಪ್ಪ ಭೀಮಪ್ಪ ಢವಳೇಶ್ವರ, ಗಿರೀಶ ಸುಭಾಸ ಢವಳೇಶ್ವರ, ಮಲ್ಲಿಕಾರ್ಜುನ ಭೀಮಪ್ಪ ಢವಳೇಶ್ವರ, ಬಸಪ್ಪ ಮಲ್ಲಪ್ಪ ತೇಲಿ, ಅಡಿವೆಪ್ಪ ಶಿವಪ್ಪ ತುಕ್ಕನ್ನವರ, ಆನಂದ ಬಸವಂತೆಪ್ಪ ನಿಡಗುಂದಿ, ಪ್ರಶಾಂತ ಬಸಪ್ರಭು ನಿಡಗುಂದಿ, ಚನ್ನಬಸು ಭೀಮಪ್ಪ ಬಡ್ಡಿ, ರವೀಂದ್ರ ಈರಪ್ಪ ಭಾಗೋಜಿ, ಶ್ರೀಶೈಲ ಯಲ್ಲಪ್ಪ ಮದಗನ್ನವರ, ತಮ್ಮಣ್ಣ ಶಿವಬಸು ಶಾಬನ್ನವರ, ಶ್ರೀಕಾಂತ ಶಿವಯ್ಯ ಹಿರೇಮಠ, ಹಿಂದುಳಿದ ವರ್ಗ ಅ ದಿಂದ-ದೇವಪ್ಪ ಫಕೀರಪ್ಪ ಕೌಜಲಗಿ, ಕುಸುಮಾ ಆನಂದ ತೇಲಿ, ಲಕ್ಷ್ಮಣ ಹಣಮಂತ ಶಾಬನ್ನವರ, ಶಿವಬಸು ಅಂಬನ್ನ ಶಾಬನ್ನವರ, ಮಹಿಳಾ ವರ್ಗದಿಂದ- ಸುಮಿತ್ರಾ ಪ್ರಕಾಶ ಶೇಡಬಾಳ, ಮಲ್ಲವ್ವ ಶಿವಲಿಂಗಪ್ಪ ಸತ್ತಿಗೇರಿ, ಮಹಾದೇವಿ ಶಂಕ್ರಯ್ಯ ಹಿರೇಮಠ, ಪರಿಶಿಷ್ಟ ಜಾತಿಯಿಂದ- ಲಕ್ಷ್ಮಣ ಬಸವಂತ ಕೆಳಗಡೆ, ಧರ್ಮರಾಜ ನಾಯ್ಕಪ್ಪ ಪೊಳ ಸ್ಫರ್ಧೆಯಲ್ಲಿದ್ದಾರೆ.
1995ರಲ್ಲಿ ಸ್ಥಾಪನೆಯಾದ ಈ ಸೊಸೈಟಿಯ 24 ವರ್ಷಗಳ ಅವಧಿಯಲ್ಲಿ 5 ಸಾರಿ ಆಡಳಿತ ಮಂಡಳಿಗೆ ಚುನಾವಣೆ ನಡೆಯದೆ ಅವಿರೊಧ ಆಯ್ಕೆ ನಡೆದಿತ್ತು. ಈ ಬಾರಿ ಆಡಳಿತ ಮಂಡಳಿಯ ಚುನಾವಣೆ ನಡೆಯುತ್ತಿರುವುದು ಕುತೂಹಲ ಮೂಡಿಸಿದೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button