Latest

ಮೂಡಲಗಿಯಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ತಯಾರಿ ಸಭೆ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಸಮೀಪಿಸಿದ್ದು, ವಲಯ ವ್ಯಾಪ್ತಿಯಲ್ಲಿ 18 ಪರೀಕ್ಷಾ ಕೇಂದ್ರಗಳಿದ್ದು, 6,135 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳ ಜೊತೆಯಲ್ಲಿ ವೈದ್ಯಕೀಯ ಹಾಗೂ ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವುದು ಪರೀಕ್ಷಾ ಅಧೀಕ್ಷಕರ ಕರ್ತವ್ಯವಾಗಿದೆ ಎಂದು ಮೂಡಲಗಿ ಬಿ.ಇ.ಓ ಅಜೀತ ಮನ್ನಿಕೇರಿ ಹೇಳಿದರು.
  ಅವರು ಬಿ.ಆರ್.ಸಿ ಕಛೇರಿಯಲ್ಲಿ ಬುಧವಾರ ಪರೀಕ್ಷಾ ಅಧೀಕ್ಷಕರ ಸಿದ್ಧತಾ ಸಭೆ ಹಾಗೂ ಹತ್ತನೇ ತರಗತಿ ಶಿಕ್ಷಕರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.  ಮಕ್ಕಳ ಮನೆ ಭೇಟಿ, ಪರೀಕ್ಷಾ ಭಯದ ನಿವಾರಣೆ ಹಾಗೂ ವಿದ್ಯಾರ್ಥಿಗಳಿಗೆ ಉಪಯುಕ್ತ ಹಾಗೂ ಕ್ಲಿಷ್ಠಾಂಶಗಳನ್ನು ನುರಿತ ಶಿಕ್ಷಕರಿಂದ ಪರಿಹರಿಸಬೇಕು. ಪರೀಕ್ಷಾ ದಿನಗಳಂದು ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿಯಲ್ಲಿದ್ದು, ಸಮೀಪದ ಪೋಲಿಸ್ ಠಾಣೆಯಿಂದ ಅಗತ್ಯ ಸಿಬ್ಬಂದಿಗಳನ್ನು, ಆರೋಗ್ಯ ಇಲಾಖೆಯಿಂದ ವೈದ್ಯಕೀಯ ನೇರವು ಹಾಗೂ ಮೂಲಭೂತ ಅಗತ್ಯತೆಗಳಾದ ಆಸನದ ವ್ಯವಸ್ಥೆ, ಕುಡಿಯುವ ನೀರು, ವರ್ಗ ಕೊಠಡಿಗಳಿಗೆ ಮೇಲ್ವಿಚಾರಕ ನೇಮಕ ಮಾಡಿಕೊಳ್ಳ ಬೇಕು. ಮೊಬೈಲ್ ಬಳಕೆ ಸಂಪೂರ್ಣ ನಿಷೇಧವಿದ್ದು ಬಳಕೆಗೆ ಆಸ್ಪದ ನೀಡಬಾರದು ಎಂದರು.
 ವಲಯ ವ್ಯಾಪ್ತಿಯ ಶಾಲೆಗಳಲ್ಲಿ ಸಾಯಂಕಾಲ ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಲು ವ್ಯವಸ್ಥೆ ಮಾಡಿರುವುದು ಪ್ರಶಂಸನೀಯವಾಗಿದೆ. ಮನೆ ಮನೆ ಭೇಟಿ, ವಲಯದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಪರೀಕ್ಷೆಯ ಕುರಿತು ಮನವರಿಕೆ ಕಾರ್ಯಕ್ರಮ ಮೆಚ್ಚುವಂತಹದು. ಮುಖ್ಯ ಅಧೀಕ್ಷಕರಿಗೆ, ಸಹಾಯಕ ಅಧೀಕ್ಷಕರಿಗೆ ಈಗಾಗಲೇ ಪರೀಕ್ಷಾ ಮಂಡಳಿಯ ನಿರ್ದೇಶನಗಳನ್ನು ನೀಡಿದ್ದು ಪರೀಕ್ಷೆಗಳು ಯಶಸ್ವಿಯಾಗಿ ಜರುಗಲು ಎಲ್ಲರ ಪಾತ್ರ ಪ್ರಮುಖವಾಗಿದೆ ಎಂದು ನುಡಿದರು.
  ಪರೀಕ್ಷೆಯ ನೋಡಲ್ ಅಧಿಕಾರಿ ಎಸ್.ಎ ನಾಡಗೌಡರ ಮಾತನಾಡಿ, ವಲಯ ವ್ಯಾಪ್ತಿಯ ಪರೀಕ್ಷಾ ಕೇಂದ್ರಗಳು, ಅಧೀಕ್ಷಕರುಗಳ ಮಾಹಿತಿ ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ಕೈಗೊಳ್ಳ ಬೇಕಾದ ಕಾರ್ಯಗಳನ್ನು ವಿವರಿಸಿದರು.
 ಸಭೆಯಲ್ಲಿ ಇಸಿಒ ಟಿ.ಕರಿಬಸವರಾಜು, ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಎಲ್.ಐ ಕೊಳವಿ, ಬಿ.ಆರ್.ಪಿಗಳಾದ ಪಿ.ಜಿ ಪಾಟೀಲ, ಕೆ.ಎಲ್ ಮೀಶಿ, ಎ.ಬಿ ಚವಡನ್ನವರ, ಅಧೀಕ್ಷಕರಾದ ಗೀತಾ ಕರಗಣ್ಣಿ, ಜೆ.ಎಮ್ ಕಾಮಣ್ಣವರ, ಎಸ್.ಎಮ್ ಸೊನ್ನದ, ಆರ್.ಎಸ್ ಅಳಗುಂಡಿ, ಎಸ್.ಎಮ್ ಗುಗ್ಗರಿ, ಎಸ್.ಬಿ ನ್ಯಾಮಗೌಡರ, ರೇಣುಕಾ ಆಣಿ, ಮೀನಾಕ್ಷೀ ಖನದಾಳೆ, ರಾಜೇಶ್ವರಿ ನಾಯಿಕ ಹಾಗೂ ಎಸ್‍ಎಸ್‍ಎಲ್‍ಸಿ ತರಗತಿಗಳ ಶಿಕ್ಷಕರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button