ವೀಡಿಯೋ ಕೃಪೆ -ಕಹಳೆ ನ್ಯೂಸ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮತ್ತೊಮ್ಮೆ ಯಕ್ಷಗಾನದಲ್ಲಿ ನರೇಂದ್ರ ಮೋದಿ, ಸ್ವಚ್ಛ ಭಾರತ, ಕೇಸರಿಪಡೆ ಪರವಾದ ಧ್ವನಿ ಪ್ರತಿಧ್ವನಿಸಿದ್ದು, ಈ ಕುರಿತ ವೀಡಿಯೋ ಈಗ ವೈರಲ್ ಆಗಿದೆ.
ವನದುರ್ಗಾ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ, ದೇಂತಡ್ಕ, ಬಂಟ್ವಾಳ ಪ್ರದರ್ಶಿಸಿದ ಛತ್ರಪತಿ ಶಿವಾಜಿ ಪ್ರಸಂಗದ ಯಕ್ಷಗಾನದಲ್ಲಿ ಕಲಾವಿದರೊಬ್ಬರು, ದುಷ್ಟತನವನ್ನು ಹೋಗಲಾಡಿಸಿ ಸ್ವಚ್ಛ ಭಾರತ ಮಾಡುವಂತಹ ನಿನ್ನಂತಹ ನರಂದ್ರ ಮೋದಿ ಮತ್ತೆ ಬರಬೇಕು ಎನ್ನುವ ದೃಷ್ಯದ ತುಣುಕುಗಳಿರುವ ವೀಡಿಯೋ ಭಾರೀ ವೈರಲ್ ಆಗಿದೆ.
”ಈ ಯವನರು ಕಾಲಿಟ್ಟಂತಹ ಈ ದುಷ್ಟತನವನ್ನು ಹೋಗಲಾಟಡಿಸಿ ಸ್ವಚ್ಚ ಭಾರತ ಮಾಡುವಂತಹ ನಿನ್ನಂತಹ ನರೇಂದ್ರ ಮೋದಿ ಬರಬೇಕು ಎನ್ನುವುದೇ ನನ್ನ ಬಯಕೆ. ಈ 5 ವರ್ಷ ಮಾತ್ರವಲ್ಲ ಮತ್ತೆ 5 ವರ್ಷ ಬಂದರೂ ಈ ಭಾರತವನ್ನು ಸ್ವಚ್ಛ ಮಾಡುವುದಕ್ಕೆ ಕಷ್ಟವಿದೆ. ಈವರೆಗೂ ಅಷ್ಟು ಹೊಲಸು ಮಾಡಿ ಹಾಕಿಯಾಗಿದೆ. ಅದನ್ನು ತೊಳೆದು ಗಂಗೆಯಲ್ಲಿ ಲೀನ ಮಾಡುವುದಕ್ಕೆ ಅದಕ್ಕಿರುವುದು ತರುಣ ಪಡೆ ಮಾತ್ರ. ಕೇಸರಿ ತರುಣ ಪಡೆಗಳು ಒಂದೊಮ್ಮೆ ಎದ್ದರೆ ಮಾತ್ರ ತಾಯಿ ಭಾರತಿಯನ್ನು ದಾಸ್ಯದ ಸಂಕೋಲೆಯಿಂದ ಬಿಡುಗಡೆ ಮಾಡುವುದಕ್ಕೆ ಸಾಧ್ಯವಿದೆ. ಮಗನೆ ನೀನು ಒಂದು ಹೊಸ ತಂಡವನ್ನು ಕಟ್ಟಬೇಕಿದೆ. ರಾತ್ರಿಯ ಹೊತ್ತು ದುಷ್ಟರು ಬಂದು ಗೋವನ್ನು ಅಪಹರಿಸಿಕೊಂಡು ಹೋಗಬೇಕಾದರೆ ಜಾಗ್ರತೆ ಮಾಡಲು ಹಿಂದೂ ಜಾಗರಣೆಯ ವೇದಿಕೆಯನ್ನೇ ನಿರ್ಮಾಣ ಮಾಡಬೇಕು. ಆ ಹುಲಿಗಳನ್ನು ಜೊತೆಗೂಡಿಸಿಕೊಂಡು ನೀನು ನಮ್ಮ ರಾಷ್ಟ್ರವನ್ನು ಕಾಪಾಡಬೇಕು. ಅದಕ್ಕಾಗಿ ತಾಯಿ ಭಾರತಾಂಬೆಯ ಪವಿತ್ರ ರಜವನ್ನು ನಿನಗೆ ಕೊಡುತ್ತೇನೆ” ಎಂದು ಯಕ್ಷಗಾನ ಕಲಾವಿದ ಹೇಳುವ ದೃಷ್ಯ ವೀಡಿಯೋದಲ್ಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ