Latest

ಯಾರಾಗಬೇಕು ಬೆಳಗಾವಿ ಎಂಪಿ -2019? -ಪ್ರಗತಿವಾಹಿನಿ ಸಮೀಕ್ಷೆ

  ಪ್ರಗತಿವಾಹಿನಿ ಸಮೀಕ್ಷೆ -ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕು?

 

ಇದೇ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಸಜ್ಜಾಗುತ್ತಿವೆ. ಅಭ್ಯರ್ಥಿಯ ಆಯ್ಕೆಯಿಂದ ಆರಂಭವಾಗಿ ಗೆಲ್ಲುವ ತಂತ್ರದವರೆಗೆ ಪ್ಲ್ಯಾನ್ ಆಗಬೇಕು. ಇದಕ್ಕಾಗಿ ತಂಡಗಳ ರಚನೆಯಾಗಬೇಕು. ಕೆಳಮಟ್ಟದಿಂದ ಹಿಡಿದು ಪ್ರತಿ ಹಂತದಲ್ಲಿ ದುಡಿಯುವ, ವಿಶ್ವಾಸಾರ್ಹ ಜನರ ಟೀಮ್ ಕಟ್ಟಬೇಕು….

ಈ ಎಲ್ಲವುಗಳಲ್ಲಿ ಮೊದಲು ಆಗಬೇಕಾದದ್ದು ಮತ್ತು ಅತ್ಯಂತ ಪ್ರಮುಖವಾದದ್ದು ಈ ಬಾರಿ ಅಭ್ಯರ್ಥಿ ಯಾರಾಗಬೇಕು ಎನ್ನುವುದು. ಯಾರನ್ನು ಕಣಕ್ಕಿಳಿಸಬೇಕು? ಗೆಲ್ಲುವ ಅಭ್ಯರ್ಥಿ ಯಾರು? ಹಾಲಿ ಸಂಸದರನ್ನೇ ಕಣಕ್ಕಿಳಿಸಿದರೆ ಉತ್ತಮವೇ? ಕಳೆದ ಬಾರಿ ಸೋತವರಿಗೆ ಟಿಕೆಟ್ ಕೊಟ್ಟರೆ ಏನಾಗುತ್ತದೆ? ಯಾವ ಜಾತಿಯ ಅಭ್ಯರ್ಥಿ ಸ್ಪರ್ಧಿಸಿದರೆ ಗೆಲುವು ಸುಲಭವಾಗುತ್ತದೆ? ಎದುರಾಳಿ ಯಾರಾಗಬಹುದು? ಮತದಾರರ ಮನದಾಳದಲ್ಲಿ ಏನಿದೆ?… ಹೀಗೆ ಹತ್ತಾರು ಪ್ರಶ್ನೆಗಳು ರಾಜಕೀಯ ಪಕ್ಷಗಳನ್ನು ಕಾಡುತ್ತಿವೆ.

ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೂರೂ ಪಕ್ಷಗಳು ಪ್ರತಿ ಕ್ಷೇತ್ರದ ಅಭ್ಯರ್ಥಿಯ ಕುರಿತು ತಲೆಕೆಡಿಸಿಕೊಂಡಿವೆ. ಬಿಜೆಪಿ ರಾಷ್ಟ್ರದ ಶೇ.50ರಷ್ಟು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾವಣೆಗೆ ಚಿಂತನೆ ನಡೆಸಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆಯ ಗೊಂದಲದಲ್ಲಿವೆ. ಹಾಗಾಗಿ ಈ ಮೂರೂ ಪಕ್ಷಗಳು ಅಭ್ಯರ್ಥಿ ನಿರ್ಧರಿಸುವ ಗ್ರೌಂಡ್ ವರ್ಕನ್ನು ಜೋರಾಗಿ ನಡೆಸುತ್ತಿವೆ. ಈಗಾಗಲೆ ವಿಶ್ವಾಸಾರ್ಹ ಜನರ ತಂಡಗಳು ಆ ಕೆಲಸದಲ್ಲಿ ತೊಡಗಿಕೊಂಡಿವೆ.

ಈ ಎಲ್ಲದಕ್ಕೂ ಅತ್ಯಂತ ಪ್ರಮುಖ ಆಧಾರ ಮತದಾರರಾದ ನಿಮ್ಮ ಮನಸ್ಸಿನಲ್ಲೇನಿದೆ ಎನ್ನುವುದು. ಜನ ಬಯಸಿದ ಅಭ್ಯರ್ಥಿಯನ್ನು ಕಣಕ್ಕಳಿಸಬೇಕಾದದ್ದು ರಾಜಕೀಯ ಪಕ್ಷಗಳ ಮಹತ್ವದ ಜವಾಬ್ದಾರಿ ಮತ್ತು ಅನಿವಾರ್ಯತೆ. ಹಾಗಾಗಿ ಮತದಾರರ ಮನದಾಳವನ್ನು ರಾಜಕೀಯ ಪಕ್ಷಗಳ ಮುಖಂಡರ ಮುಂದಿಡುವುದಕ್ಕಾಗಿ ಪ್ರಗತಿವಾಹಿನಿ ಸಮೀಕ್ಷೆಯೊಂದನ್ನು ನಡೆಸಲು ನಿರ್ಧರಿಸಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಎಂಪಿ ಯಾರಾಗಬೇಕು ಎನ್ನುವ ಕುರಿತು ನಿಮ್ಮ ಅನಿಸಿಕೆಯನ್ನು ಗರಿಷ್ಠ 200 ಪದಗಳ ಮಿತಿಯಲ್ಲಿ ಬರೆದು ಕಳಿಸಿ. ಮತ್ತು ನಿಮ್ಮ ಆಯ್ಕೆಗೆ ಕಾರಣವನ್ನೂ ಸ್ಪಷ್ಟವಾಗಿ ನಮೂದಿಸಿ. ಕ್ಷೇತ್ರದ ಅಭಿವೃದ್ಧಿ, ರಾಷ್ಟ್ರದ ಭವಿಷ್ಯ, ವಯಕ್ತಿಕ ಸಚ್ಚಾರಿತ್ರ್ಯ, ಜನರೊಂದಿಗಿನ ನಡವಳಿಕೆ… ಹೀಗೆ ಬೇರೆ ಬೇರೆ ಕಾರಣವಿರಬಹುದು ನಿಮ್ಮ ಆಯ್ಕೆಗೆ. ವೈಯಕ್ತಿಕ ನಿಂದನೆ ಬೇಡ. ಆದಷ್ಟು ಬುಲೆಟ್ ಪಾಯಿಂಟ್ ರೂಪದಲ್ಲಿ ನಿಮ್ಮ ಬರಹವಿದ್ದರೆ ಉತ್ತಮ. ನಿಮ್ಮ ಬರಹವೇ ರಾಜಕೀಯ ಪಕ್ಷಗಳಿಗೆ ಅಭ್ಯರ್ಥಿ ಆಯ್ಕೆಗೆ ಮಾರ್ಗದರ್ಶನವಾಗಬಹುದು. ಆಯ್ದ ಬರಹಗಳನ್ನು ಪ್ರಗತಿವಾಹಿನಿಯಲ್ಲಿ ಪ್ರಕಟಿಸಲಾಗುವುದು. ಜನೆವರಿ 28ರೊಳಗೆ ನಿಮ್ಮ ಬರಹವನ್ನು ಕಳಿಸಿರಿ. 

ನಿಮ್ಮ ಬರಹವನ್ನು ಇಲ್ಲೆ ಕೆಳಗಿರುವ ಕಮೆಂಟ್ ಬಾಕ್ಸ್ ನಲ್ಲಿ ಟೈಪ್ ಮಾಡಿ ಹಾಕಬಹುದು. ಇಲ್ಲವೇ [email protected] ಗೆ ಮೇಲ್ ಮಾಡಬಹುದು. ಜೊತೆಗೆ ನಿಮ್ಮ ವಿಳಾಸ, ಮೊಬೈಲ್ ನಂಬರ್ ನಮೂದಿಸಿ, ನಿಮ್ಮದೊಂದು ಪುಟ್ಟ ಫೋಟೋವನ್ನೂ ಕಳಿಸಿ. ಅಗತ್ಯವಾದರೆ ನಿಮ್ಮ ಹೆಸರನ್ನು ಗೌಪ್ಯವಾಗಿಡಲಾಗುವುದು. 

ಕನ್ನಡ ಅಥವಾ English ಭಾಷೆಯಲ್ಲಿ ನಿಮ್ಮ ಬರಹ ಕಳಿಸಬಹುದು. ನೆನಪಿರಲಿ ಗರಿಷ್ಠ ಪದಗಳ ಮಿತಿ 200.

 

(ಈ ಸಂದೇಶದ ಲಿಂಕ್ ನ್ನು ಹೆಚ್ಚು ಜನರಿಗೆ ಶೇರ್ ಮಾಡಿ. ಹೆಚ್ಚು ಜನರು ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿ)

 

https://pragati.taskdun.com

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button