ಪ್ರಗತಿವಾಹಿನಿ ಸುದ್ದಿ, ಅಗಸಗಿ ;
ಬೆಳಗಾವಿ ತಾಲೂಕಿನ ಕೇದನೂರ ಗ್ರಾಮದ ೧೯ ವರ್ಷದ ನಾಗರಾಜ ಮಾರುತಿ ಬಿರ್ಜೆ ಇಂದು ಸಂಜೆ ತಮ್ಮ ಹೊಸದಾಗಿ ಕಟ್ಟುತ್ತಿರುವ ಮನೆಯ ಮೊದಲನೆಯ ಮಹಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಂದೆ ಇಲ್ಲದ ನಾಗರಾಜ ತಾಯಿ ಮತ್ತು ಸಹೊದರನ ಜತೆ ವಾಸಿಸುತ್ತಿದ್ದು, ಕಟ್ಟಡ ಕೆಲಸದ ಜತೆಗೆ ಸ್ವಂತ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದನು. ಮೃದು ಸ್ವಭಾವದವನಾಗಿದ್ದ ಈತ ಇಂದು ಬೆಳಿಗ್ಗೆ ತನ್ನ ಬಳಿಯಿದ್ದ ಮೊಬೈಲ್ ಕಳೆದುಕೊಂಡಿದ್ದಕ್ಕೆ ತಿವ್ರ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆತನ ಸಂಬಂಧಿಕರು ಪೊಲೀಸರಿಗೆ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಕಾಕತಿ ಪಿ ಎಸ್ ಐ ಅರ್ಜುನ ಹಂಚಿನಮನಿ ಈಗಷ್ಟೆ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ಕುಲಂಕಷವಾಗಿ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.