ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಗುಂಜಿ ರೈಲು ನಿಲ್ದಾಣದ ಯಾರ್ಡನಲ್ಲಿ ಹುಬ್ಬಳ್ಳಿ-ಬೆಳಗಾವಿ ಪ್ಯಾಸೆಂಜರ್ ಚಲಿಸುವ ರೈಲು ಗಾಡಿಯಿಂದ ಬಿದ್ದು ಆಕಸ್ಮಿಕವಾಗಿ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ.
ಮೃತಪಟ್ಟ ಗಂಡಸು ಅಂದಾಜು 40ರಿಂದ 45 ವರ್ಷದವರಾಗಿದ್ದು, ಮೃತನ ಎತ್ತರ 5 ಫೂಟ್ 5 ಇಂಚು, ತಲೆಯ ಮುಂದೆ ಕೂದಲು ಇಲ್ಲ, ಮೀಸೆ ಇದೆ. ಬಿಳಿ ಫುಲ್ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಮೃತನ ಹತ್ತಿರ ಬೆಳಗಾವಿ-ಖಾನಾಪುರವರೆಗೆ ರೈಲ್ವೆ ಪ್ರಯಾಣದ ಟಿಕಿಟ್ ಇತ್ತು.
ಗಂಡಸು ಕಾಣೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಥವಾ ವಾರಸುದಾರರು ಯಾರಾದರೂ ಇದ್ದಲ್ಲಿ ಕೂಡಲೇ ಪೊಲೀಸ್ ಉಪ ನೀರಿಕ್ಷಕರು, ರೇಲ್ವೆ ಪೊಲೀಸ್ ಠಾಣೆ, ಬೆಳಗಾವಿ ಇವರಿಗೆ ತಿಳಿಸಲು ರೈಲ್ವೆ ಪೊಲೀಸ್ ಪ್ರಕಟಣೆಯಲ್ಲಿ ಕೋರಲಾಗಿದೆ. ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 0831-2405273
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ