ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ರಾಜ್ಯದಲ್ಲಿ ವಾರದೊಳಗೆ ಭಾರತೀಯ ಜನತಾಪಾರ್ಟಿ ಸರಕಾರ ರಚನೆಯಾಗಲಿದೆ ಎಂದು ಮಾಜಿ ಸಚಿವ ಉಮೇಶ ಕತ್ತಿ ಹೇಳಿದ್ದಾರೆ.
ಬುಧವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ನ 15ಕ್ಕೂ ಹೆಚ್ಚು ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ನಾವು ಅವರನ್ನು ಕರೆಯುತ್ತಿಲ್ಲ. ಅವರಾಗೇ ಪಕ್ಷ ಬಿಟ್ಟು ಬರ್ತಾರೆ. ಹಾಗಾಗಿ ಸರಕಾರ ಬಿದ್ದು, ಬಿಜೆಪಿ ಸರಕಾರ ರಚನೆಯಾಗುತ್ತದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಎಲ್ಲಿದೆ ಸರಕಾರ ಎಂದು ಪ್ರಶ್ನಿಸಿದ ಅವರು, ಈ ಸರಕಾರ ಆದಷ್ಟು ಬೇಗ ಹೋಗಬೇಕು. ಬಿಜೆಪಿ ಸರಕಾರ ಬರಬೇಕು ಎನ್ನುವುದು ಜನರ ನಿರೀಕ್ಷೆಯಾಗಿದೆ ಎಂದೂ ಉಮೇಶ ಕತ್ತಿ ಹೇಳಿದರು.
ಮಾಜಿ ಸಚಿವ ರಮೇಶ ಜಾರಕಿಹೊಳಿ ಜೊತೆ ನಾವು ಮಾತಾಡಿರಬಹುದು. ಅವರು ನಮಗೆ ಆತ್ಮೀಯರು. ಅವರೊಂದಿಗೆ ಮಾತನಾಡುತ್ತಿರುತ್ತೇವೆ ಎಂದರು ಉಮೇಶ ಕತ್ತಿ.
ಸುಮ್ಮನೇ ಜನರನ್ನು ಮರುಳುಮಾಡುವುದಕ್ಕಾಗಿ ಉಮೇಶ ಕತ್ತಿ ಇಂತಹ ಹೇಳಿಕೆ ನೀಡಿದರೋ… ನಿಜವಾಗಿ ಅಂತಹ ಬೆಳವಣಿಗೆಯೇನಾದರೂ ನಡೆಯುತ್ತಿದೆಯೋ ಎನ್ನುವುದನ್ನು ಕಾದು ನೋಡಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ