ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸನಾತನ ಧರ್ಮ ರಕ್ಷಣೆಯ ಸಲುವಾಗಿ ಶೃಂಗೇರಿಯ ಶಾರದಾ ಪೀಠವು ಹಮ್ಮಿಕೊಂಡಿರುವ ವಿಜಯಯಾತ್ರೆಯ ನಿಮಿತ್ತ ಗುರುವಾರ ಭಾಗ್ಯ ನಗರದ ಸಿಟಿಹಾಲ್‌ನಲ್ಲಿ ವಿವಿಧ ಕಾರ್ಯಕ್ರಮಗಳು ನಡೆದವು.
ಬೆಳಿಗ್ಗೆ 8 ಘಂಟೆಗೆ ಶ್ರೀಮಠದ ಅರ್ಚಕರಿಂದ ಶಾರದಾ ಚಂದ್ರಮೌಳೀಶ್ವರ ಪೂಜೆ, ಬೆಳಿಗ್ಗೆ 10 ಘಂಟೆಯಿಂದ ಮಹಾಸ್ವಾಮಿಗಳವರ ದರ್ಶನ, ಪಾದುಕಾಪೂಜೆ, ಭಿಕ್ಷಾವಂದನೆ ಇತ್ಯಾದಿ ಗುರುಸೇವೆಗಳು ನಡೆದವು.
ಸಂಜೆ ಭಾಗ್ಯನಗರದ ರಾಮನಾಥ ಮಂಗಲ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಗಾವಿ ಮಹಾ ಜನತೆ ಪರವಾಗಿ ಗುರುಗಳಿಗೆ ಅಭಿನಂದನಾ ಪತ್ರ, ಗುರುಕಾಣಿಕೆ ಹಾಗೂ ಫಲಪುಷ್ಪ ಸಮರ್ಪಣೆ, ಶ್ರೀ ಶಂಕರ ತತ್ವ ಪ್ರಸಾರ ಅಭಿಯಾನ ಸಮಿತಿಯಿಂದ ಉಪನ್ಯಾಸ, ಕೃತಜ್ಞತಾ ಸಮರ್ಪಣೆ ಹಾಗೂ ಗುರುಗಳಿಂದ ಆರ್ಶಿವಚನ, ಪ್ರಸಾದ ವಿತರಣೆ ನಡೆಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ