ಪ್ರಗತಿವಾಹಿನಿ ಸುದ್ದಿ, ನವದೆಹಲಿ
ಕೇಂದ್ರ ಸರಕಾರ ಮಂಡಿಸಿರುವ ಬಜೆಟ್ ಅಭೂತಪೂರ್ವ ಎಂದು ಬಣ್ಣಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯದ್ಯಂತ ವಿಜಯೋತ್ಸವ ಆಚರಿಸಲು ಕರೆ ನೀಡಿದ್ದಾರೆ.
ಬಜೆಟ್ ನ ಪ್ರತಿ ಅಂಶವೂ ಲಾಭದಾಯಕವಾಗಿದೆ. ಇಂತಹ ಬಜೆಟ್ ದೇಶದ ಇತಿಹಾಸದಲ್ಲೇ ಮೊದಲು ಎಂದು ಯಡಿಯೂರಪ್ಪ ಹೇಳಿದ್ದಾರೆ.
ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಕೇಂದ್ರ ಸರಕಾರದ ಬಜೆಟ್ ಐತಿಹಾಸಿಕ ಎಂದು ಬಣ್ಣಿಸಿದ್ದಾರೆ. ಇತಿಹಾಸದಲ್ಲೆಂದೂ ಇಂತಹ ಬಜೆಟ್ ನೋಡಿರಲಿಲ್ಲ ಎಂದಿರುವ ಅವರು, ದೇಶದ ಪ್ರತಿಯೊಬ್ಬರಿಗೂ ಈ ಬಜೆಟ್ ನಿಂದ ಲಾಭವಾಗಲಿದೆ ಎಂದಿದ್ದಾರೆ.
ಸಂಸದ ಸುರೇಶ ಅಂಗಡಿ, ಆದಾಯ ತೆರಿಗೆ ಮಿತಿ ಏರಿಕೆ ಮಧ್ಯಮ ವರ್ಗ ಮತ್ತು ಬಡ ವರ್ಗಕ್ಕೆ ಭಾರೀ ಲಾಭ ತಂದುಕೊಡಲಿದೆ. ಜಿಎಸ್ ಟಿ ಮಿತಿಯನ್ನು 40 ಲಕ್ಷಕ್ಕೆ ಏರಿಸಿರುವುದು, ರೈತರ ಖಾತೆಗೆ ಹಣ ಹಾಕುವುದು ಸೇರಿದಂತೆ ಪ್ರತಿಯೊಬ್ಬರನ್ನೂ ತಲುಪುವ ಬಜೆಟ್ ಇದು ಎಂದು ಬಣ್ಣಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ