Latest

ವಿದ್ಯಾರ್ಥಿಗಳು ಸಂಶೋಧನೆಗೆ ಹೆಚ್ಚಿನ ಗಮನ ಹರಿಸಬೇಕು- ಕೆ.ಕೆ.ರವಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಸಂಶೋಧನೆಯತ್ತ ಹೆಚ್ಚಿನ ಗಮನ ಹರಿಸಬೇಕೆಂದು ಗಡಹಿಂಗ್ಲಜ ಗಜಾನನ ಮಹಾರಾಜ ಎಂಜನಿಯರಿಂಗ್ ಮಹಾವಿದ್ಯಾಲಯದ ಪ್ರಾಚಾರ್ಯ ಕೆ. ಕೆ. ರವಿ ಹೇಳಿದರು.
ಭರತೇಶ ಶೀಕ್ಷಣ ಸಂಸ್ಥೆಯ ಮೋತಿಚಂದ ಲೇಂಗಡೆ ಭರತೇಶ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರ ಮಟ್ಟದ ಅವಿಷ್ಕಾರ -೨೦೧೯ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಶೋಧನೆ ಕೈಗೊಳ್ಳಲು ಉನ್ನತ ಪದವಿಗಳನ್ನು ಪಡೆಯಬೇಕಾಗುತ್ತದೆ. ಅದಕ್ಕಾಗಿ ದೂರದೃಷ್ಟಿ ಹೊಂದಿರಬೇಕು. ಸಂಕೀರ್ಣವಾಗಿ ವಿನ್ಯಾಸಗೊಳಿಸಲಾಗಿರುವ ಪ್ರಾಚೀನ ದೇವಾಲಯಗಳನ್ನು ಕೆತ್ತಿದ ಮಹಾನ್ ಭಾರತೀಯ ಶಿಲ್ಪಗಳಗಳನ್ನು ಉದಾಹರಿಸಿದರು. ವಿದ್ಯುತ್ ಪತ್ತೆಹಚ್ಚಿದ ಅಗಸ್ತ್ಯ ಮುನಿಯವರ ಉದಾಹರಣೆಗಳು, ಶೂನ್ಯ ಪರಿಕಲ್ಪನೆಯನ್ನು ಕಂಡುಹಿಡಿದ ಬ್ರಹ್ಮಗುಪ್ತರು, ಗುರುತ್ವಾಕರ್ಷಣೆಯನ್ನು ಕಂಡುಹಿಡಿದ ಭಾಸ್ಕರಾಚಾರ್ಯರು. ನಮ್ಮ ಜ್ಯೋತಿಷಿಗಳು ಗ್ರಹಣವನ್ನು ಊಹಿಸುವ ಪರಿಕಲ್ಪನೆಯ ಬಗ್ಗೆ ಅವರು ಮಾಹಿತಿ ನೀಡಿದರು.

ಸಮಾರಂಭದಲ್ಲಿ ಭರತೇಶ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎಸ್.ಎನ್.ತುಳಸಿಗೇರಿ ಅವರು ಮಾತನಾಡಿ, ಮೂಲ ಪಠ್ಯಕ್ರಮದ ಆಧಾರದ ಮೇಲೆ ಅಧ್ಯಯನವನ್ನು ಅಭಿವೃದ್ಧಿಪಡಿಸುವಂತೆ ಯೋಜನಾ ಅಭಿವೃದ್ಧಿಗೆ ಕೇಂದ್ರೀಕರಿಸಬೇಕೆಂದು ಮತ್ತು ಪುನರ್ವಸತಿ ಮಾಡಬೇಕೆಂದು ಕರೆ ನೀಡಿದರು.  ಕೇಂದ್ರ ಸರ್ಕಾರದ ಹ್ಯಾಕ್ಥ್ಲಾನ್, ಕೌಶಲ್ಯ ಭಾರತ, ಇನ್ಕ್ಯುಬೇಷನ್ ಸೆಂಟರ್ ಇತ್ಯಾದಿಗಳ ಬಗ್ಗೆ ದಿಟ್ಟ ಉಪಕ್ರಮಗಳು ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿವೆ ಎಂದರು .

ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಭರತ ಪಾಟೀಲ, ಲಿಂಗರಾಜ್ ವೈದ್ಯ, ಬಿ.ವಿ.ವಿ.ಎಸ್ ಪಾಲಿಟೆಕ್ನಿಕ್, ಬಾಗಲಕೋಟೆ, ಸಿದ್ದಲಿಪ್ಪಪ್ಪ ಗಂಧ , ಬಿ.ಟಿ ಪಾಟೀಲ್ ಪಾಲಿಟೆಕ್ನಿಕ್, ವಿನಾಯಕ್ ನನೊಜಿ, ಜಿ.ಆರ್.ದೇಶಪಾಂಡೆ (ಹೈಲೋಕ್ ಹೈಡ್ರೋಟೆಕ್ನಿಕ್ ಪ್ರೈವೇಟ್ ಲಿಮಿಟೆಡ್) ಅಭಿಷೇಕ್ ಮಗದುಮ್ , ಅಂಜಜಾ ಪ್ರಕಾಶ್, ಕೆ.ಸಿ. ಅಗರವಾಲ, ಸಮೀರ್ ಮನಿಯಾರ್, ವಿಜಯ್ ಪವಾರ್, ಗುಲ್ಜಾರ್, ಮೊದಲಾದವರು ಉಪಸ್ಥಿತರಿದ್ದರು. ಸಾಗರ ಬೆಲವಾಡಿ ಅತಿಥಿಗಳನ್ನು ಸ್ವಾಗತಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button