Latest

ಶಾಸಕರ ಭವನವೂ ಇಲ್ಲ, ಅಧಿವೇಶನ ವಿಸ್ತರಣೆಯೂ ಇಲ್ಲ -ಸಿಎಂ

  ಉಕಕ್ಕೆ ಕಚೇರಿ ಸ್ಥಳಾಂತರಕ್ಕೆ ಸಂಪುಟ ಉಪಸಮಿತಿ ವರದಿ ನಿರೀಕ್ಷಿಸಲಾಗುತ್ತಿದೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿಯಲ್ಲಿ 10 ದಿನ ನಡೆಯುತ್ತಿರುವ ವಿಧಾನಮಂಡಳದ ಅಧಿವೇಶನವನ್ನು 30 ದಿನಗಳಿಗೆ ವಿಸ್ತರಿಸುವ ಪ್ರಸ್ತಾಪವಾಗಲಿ, ಶಾಸಕರ ವಾಸ್ತವ್ಯಕ್ಕಾಗಿ ಶಾಸಕರ ಭವನ ನಿರ್ಮಿಸುವ ಪ್ರಸ್ತಾಪವಾಗಲಿ ಸರಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಬಿಜೆಪಿಯ ಮಹಾಂತೇಶ ಕವಟಗಿಮಠ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ಬೆಂಗಳೂರಿನಂತೆ ಬಹುಮಹಡಿ ಕಟ್ಟಡ ನಿರ್ಮಣ ಮಾಡುವ ಪ್ರಸ್ತಾವನೆಯೂ ಸರಕಾರದ ಮುಂದಿಲ್ಲ ಎಂದಿದ್ದಾರೆ.

ಉತ್ತರ ಕರ್ನಾಟಕಕ್ಕೆ ಕೆಲವು ಕಚೇರಿಗಳನ್ನು ಸ್ಥಳಾಂತರಿಸಲು ವರದಿ ನೀಡುವಂತೆ ಸಚಿವಸಂಪುಟ ಉಪಸಮಿತಿ ರಚಿಸಲಾಗಿದೆ. ಸಮಿತಿ ಈಗಾಗಲೆ 2 ಬಾರಿ ಸಭೆ ನಡೆಸಿದೆ. ಅದರ ವರಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ.

2013ರಲ್ಲಿ ಸುವರ್ಣ ವಿಧಾನಸೌಧಕ್ಕೆ ಕೆಲವು ಕಚೇರಿ ಸ್ಥಳಾಂತರ ಸಂಬಂಧ ಮುಖ್ಯಕಾರ್ಯದರ್ಶಿಗಳಿಗೆ ಅಧಿಕಾರ ನೀಡಲಾಗಿತ್ತು. ಆದರೆ ಹಾಗೆ ಮಾಡಿದರೆ ಅಧಿವೇಶನ ನಡೆಸಲು ಸಮಸ್ಯೆಯಾಗುತ್ತದೆ. ಯಾವುದೇ ಕಾಯಂ ಕಚೇರಿ ಸ್ಥಳಾಂತರಿಸದಿದ್ದರೂ ಅಧಿವೇಶನ ನಡೆಸಲು ಕೊಠಡಿ ಕೊರತೆಯಾಗುತ್ತದೆ. ಹಾಗಾಗಿ ಶಾಶ್ವತವಾಗಿ ಯಾವುದೇ ಕಚೇರಿ ಸ್ಥಳಾಂರ ಸಾಧುವಲ್ಲ ಎನ್ನುವ ನಿರ್ಣಯಕ್ಕೆ ಬರಲಾಗಿತ್ತು. ಹಾಗಾಗಿ ಆ ಸಮಿತಿಯನ್ನು 2014ರಲ್ಲೇ ರದ್ಧುಪಡಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button