Latest

ಶಿವಬಸವ ಮಹಾಸ್ವಾಮಿಗಳ 129ನೇ ಜಯಂತಿ

 

 

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಕಾಯಕಯೋಗಿ ಮಹಾ ಪ್ರಸಾದಿ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಡಾ. ಶಿವಬಸವ ಮಹಾಸ್ವಾಮಿಗಳ 129ನೇ ಜಯಂತಿ ಮಹೋತ್ಸವ ಸಮಾರಂಭದ ನಿಮಿತ್ಯ ಷಟಸ್ಥಲ ಧ್ವಜಾರೋಹಣ ಕಾರ್ಯಕ್ರಮ ಬುಧವಾರ ಬೆಳಗ್ಗೆ 9 ಗಂಟೆಗೆ ಶ್ರೀ ಮಠದ ಆವರಣದಲ್ಲಿ ಜರುಗಿತು.

ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಜಗದ್ಗುರು ತೋಂಟದ ಸಿದ್ಧರಾಮ ಸ್ವಾಮಿಗಳು ಷಟಸ್ಥಲ ಸಿದ್ಧಾಂತದ ಮಹತ್ವವನ್ನು ವಿವರಿಸಿದರು. ಶ್ರೀ ಶಿವಾನಂದ ಸ್ವಾಮಿಗಳು ಷಟಸ್ಥಲ ಧ್ವಜಾರೋಹಣದ ವೈಶಿಷ್ಟವನ್ನು ತಿಳಿಸಿದರು. ವಿಜಯಲಕ್ಷ್ಮಿ ಹೊಸಮನಿ ಅವರು ಶರಣ ಗೀತೆ ಪ್ರಸ್ತುತ ಪಡಿಸಿದರು. ಪ್ರೊ. ಎ ಕೆ ಪಾಟೀಲ್ ನಿರೂಪಿಸಿದರು. ಕಾರಂಜಿಮಠದ ಗುರುಸಿದ್ಧ ಸ್ವಾಮಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button