ಪ್ರಗತಿವಾಹಿನಿ ಸುದ್ದಿ, ಯಮಕನಮರಡಿ
ಸಲೈನ್ ಹಚ್ಚಲು ವೃದ್ಧೆಯರಿಬ್ಬರಿಂದ ತಲಾ 50 ರೂ. ಪಡೆದಿದ್ದ ಆರೋಗ್ಯಾಧಿಕಾರಿ, ಕೆಲಸ ಕಳೆದುಕೊಂಡಿದ್ದಾರೆ.
ಯಮಕನಮರಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಣ ಪಡೆದಿದ್ದು, ಅದನ್ನು ಸ್ಥಳೀಯರು ವೀಡಿಯೋ ರೆಕಾರ್ಡ್ ಮಾಡಿಕೊಂಡಿದ್ದರು.
ಕೆಲ ದಿನಗಳ ಹಿಂದೆ ನಡೆದ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಹಣ ಮರಳಿಸಿದ್ದಲ್ಲದೆ, ವೈದ್ಯಾಧಿಕಾರಿ ರಾಜಿನಾಮೆ ನೀಡಿದ್ದಾರೆ.