ಪ್ರಗತಿವಾಹಿನಿ ಸುದ್ದಿ, ಪಟ್ನಾ (ಬಿಹಾರ)
ದೆಹಲಿಗೆ ತೆರಳುತ್ತಿದ್ದ ಸೀಮಾಂಚಲ ಎಕ್ಸ್ ಪ್ರೆಸ್ ರೈಲು ವೈಶಾಲಿ ಬಳಿ ಹಳಿತಪ್ಪಿದ್ದು, 7 ಜನರು ಸಾವನ್ನಪ್ಪಿದ್ದಾರೆ. ಘಟನೆ ಕುರಿತು ತನಿಖೆಗೆ ರೈಲ್ವೆ ಇಲಾಖೆ ಆದೇಶಿಸಿದೆ.
ಭಾನುವಾರ ಬೆಳಗಿನ ಜಾವ 3.55ಕ್ಕೆ ಘಟನೆ ಸಂಭವಿಸಿದ್ದು, 9 ಬೋಗಿಗಳು ಹಳಿ ತಪ್ಪಿ ಉರುಳಿ ಬಿದ್ದಿವೆ. ರೈಲು ದೆಹಲಿಗೆ ತೆರಳುತ್ತಿತ್ತು. ರೈಲಿನಡಿ ಸಿಲುಕಿದವರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ. 9 ಬೋಗಿಗಳಲ್ಲಿ ಒಂದು ಜನರಲ್ ಬೋಗಿ, ಮೂರು ಸ್ಲೀಪರ್ ಬೋಗಿ, ಒಂದು ಎಸಿ ಕೋಚ್ ಇದೆ. ವೈದ್ಯರ ತಂಡವನ್ನು ಸ್ಥಳಕ್ಕೆ ರವಾನಿಸಲಾಗಿದೆ.
ಘಟನೆ ಕುರಿತು ತನಿಖೆ ನಡೆಸಲು ಕೇಂದ್ರ ಸರಕಾರ ಸೂಚಿಸಿದ್ದು, ರೈಲ್ವೆ ಇಲಾಖೆ ಕ್ರಮ ತೆಗೆದುಕೊಂಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ