Latest

*ಹೆಲಿಕಾಪ್ಟರ್ ಪತನ*: *ಸಿಸಿಬಿ ಇನ್ಸ್ ಪೆಕ್ಟರ್ ಅರುಣ್ ಸಾಲಂಕೆ ಸೇರಿ ಆರು ಜನರು ಸಾವು*

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಪೈಲಟ್ ಸೇರಿ ಆರು ಜನರು ಸಾವನ್ನಪ್ಪಿದ್ದು, ಅವರಲ್ಲಿ ಬೆಂಗಳೂರಿನ ಸಿಸಿಬಿ ಇನ್ಸ್ ಪೆಕ್ಟರ್ ಕೂಡ ಸೇರಿದ್ದಾರೆ.

ಬೆಂಗಳೂರಿನ ಸಿಸಿಬಿ ಇನ್ಸ್ ಪೆಕ್ಟರ್ ಅರುಣ್ ಸಾಲಂಕೆ ಸೇರಿದಂತೆ ಬೆಂಗಳೂರು ಮೂಲದ ಐವರು ಮೃತಪಟ್ಟಿದ್ದಾರೆ. ನಾಲ್ವರು ಸ್ನೇಹಿತರ ಜೊತೆಗೆ ಅರುಣ್ ಸಾಲಂಕೆ ಛಾರ್ ಧಾಮ್ ಯಾತ್ರೆಗೆ ತೆರಳಿದ್ದರು. ಬದರಿನಾಥ ದೇವರ ದರ್ಶನ ಪಡೆದು ಹೆಲಿಕಾಪ್ಟರ್ ನಲ್ಲಿ ಜೊಶಿಮಠದತ್ತ ವಾಪಸ್ ಆಗುತ್ತಿದ್ದಾಗ ಚಮೋಲಿ ಜಿಲ್ಲೆಯ ಬಳಿ ಹೆಲಿಕಾಪ್ಟರ್ ದುರಂತಕ್ಕೀಡಾಗಿದ್ದು, ಪೈಲಟ್ ಸೇರಿ ಆರು ಜನರು ಸಾವನ್ನಪ್ಪಿದ್ದಾರೆ.

ಜೋಶಿಮಠದ ಕಣಿವೆಯತ್ತ ಹೆಲಿಕಾಪ್ಟರ್ ಬರುತ್ತಿದ್ದಂತೆ ವಿಮಾನ ನಾಪತ್ತೆಯಾಗಿದ್ದು, ಸಂಪರ್ಕ ಕಡಿತಗೊಂಡಿದೆ. ಚಮೋಲಿ ಜಿಲ್ಲೆಯಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ಪೈಲಟ್ ಸೇರಿ ಬೆಂಗಳೂರಿನ ಐವರು ಸೇರಿದಂತೆ ಒಟ್ಟು ಆರು ಜನರು ಸಾವನ್ನಪ್ಪಿದ್ದಾರೆ.

ಸ್ನೇಹಿತರೊಂದಿಗೆ ಚಾರ್‌ಧಾಮ್‌ ಪ್ರವಾಸಕ್ಕೆ ತೆರಳಿದ್ದ ಅರುಣ್‌ ಸಾಲಂಕಿ ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾಗಿದ್ದಾರೆ. ಮೃತ ಅರುಣ್‌ ಸಾಲಂಕಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ.

ಹೆಲಿಕಾಪ್ಟರ್ ದುರಂತದಲ್ಲಿ ಮಡಿದವರನ್ನು ಪೈಲಟ್ ಹಿಮಾಂಶು ಹಾಗೂ ಅವರ ಜೊತೆಗಿದ್ದ ಬೆಂಗಳೂರು ಮೂಲದ ಇನ್ಸ್ ಪೆಕ್ಟರ್ ಅರುಣ್, ಪ್ರತಾಪ, ಶಂಕರ್‌ ಗೌಡ, ಸುಧೀರ್‌, ಕೆ ಹೆಎಸ್‌ ನಟರಾಜ ಎಂದು ಗುರುತಿಸಲಾಗಿದೆ.

Related Articles

Back to top button