Latest

ಅಂಬೋಲಿ ಫಾಲ್ಸ್ ನಲ್ಲಿ ದುರಂತ: 400 ಅಡಿ ಪ್ರಪಾತಕ್ಕೆ ಬಿದ್ದು ಪ್ರವಾಸಿಗ ಸಾವು

ಪ್ರವಾಸಕ್ಕೆ ಬಂದಿದ್ದ ವ್ಯಕ್ತಿಯೋರ್ವರು ಪ್ರಸಿದ್ಧ ಅಂಬೋಲಿ ಫಾಲ್ಸ್ ನಲ್ಲಿ ಬಿದ್ದು ಮ್ರ‍ಿತಪಟ್ಟಿರುವ ಘಟನೆ ನಡೆದಿದೆ.

Home add -Advt

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಮೂಲದ ಡಾ.ಅಯೂಬ್ ಸಯ್ಯದ್ (45) ಮೃತ ದುರ್ದೈವಿ. ಮಂಗಳವಾರ ಅಂಬೋಲಿಗೆ ಬಂದಿದ್ದ ವೇಳೆ ಮಹಾದೇವಗಢದಲ್ಲಿ 400 ಅಡಿ ಆಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.

ಮಹಾದೇವಗಢ ಪಾಯಿಂಟ್ ನಲ್ಲಿ ಅಳವಡಿಸಲಾಗಿದ್ದ ಸುರಕ್ಷತಾ ಬೇಲಿಯನ್ನು ದಾಟಿ ಮುಂದಕ್ಕೆ ಹೋಗಿದ್ದರು. ಈ ವೇಳೆ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು, ರಕ್ಷಣಾ ತಂಡ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಈ ನಡುವೆ ಅಂಬೋಲಿ ಫಾಲ್ಸ್ ವೀಕ್ಷಣೆಗೆ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಲಾಗಿದೆ. ಕೆಲ ದಿನಗಳಿಂದ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಅರಣ್ಯ ಇಲಾಖೆ ಜಲಪಾತ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಿದೆ.
Amboli falls,belagavi,man,death,goa

Related Articles

Back to top button