Latest

ಅಖಾಡ ಸಜ್ಜು ; ಬೆಳಗಾವಿಯಲ್ಲಿ ನಾಳೆಯಿಂದ ರಂಗೇರಲಿದೆ ಕರ್ನಾಟಕ ಕುಸ್ತಿ ಹಬ್ಬ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
 ಫೆ. 8ರಿಂದ 10 ರವರೆಗೆ ನಡೆಯುವ ಕರ್ನಾಟಕ ಕುಸ್ತಿ ಹಬ್ಬಕ್ಕಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ಕುಸ್ತಿ ಅಖಾಡಕ್ಕೆ ಸಜ್ಜಾಗಿದೆ.   
ಇಂದು ಮಧ್ಯಾಹ್ನ 3.30ಕ್ಕೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಸತೀಶ ಜಾರಕಿಹೊಳಿ ಕುಸ್ತಿ ಹಬ್ಬ ಉದ್ಘಾಟಿಸುವರು. ಶಾಸಕ ಅನಿಲ ಎಸ್. ಬೆನಕೆ ಅಧ್ಯಕ್ಷತೆ ವಹಿಸುವರು. ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಮ್ ಖಾನ್, ಸಂಸದ ಸುರೇಶ ಅಂಗಡಿ,  ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ಐಹೊಳೆ ಸೇರಿದಂತೆ ಜಿಲ್ಲೆಯ ಪ್ರತಿನಿಧಿಗಳು ಉಪಸ್ಥಿತರಿರುವರು. 
ಜಿಲ್ಲಾಧಿಕಾರಿಎಸ್.ಬಿ.ಬೊಮ್ಮನಹಳ್ಳಿ, ಪೊಲೀಸ್ ಆಯುಕ್ತ ಡಿಸಿ. ರಾಜಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ. ರಾಜೇಂದ್ರ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಸೀಬಿರಂಗಯ್ಯ ಮತ್ತು  ಇತರ ಅಧಿಕಾರಿಗಳು ಭಾಗವಹಿಸುವರು. 
ಪಂದ್ಯಾವಳಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಸ್ಪರ್ಧಾಳುಗಳಿಗೆ ಊಟ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಆಹಾರ ಸುರಕ್ಷತಾ ಹಾಗೂ ಇತರೆ ಭದ್ರತೆ ಸಂಬಂಧಿಸಿದಂತೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪೊಲೀಸ್ ವ್ಯವಸ್ಥೆ,  ಆರೋಗ್ಯ ವ್ಯವಸ್ಥೆ ಸೇರಿದಂತೆ ಇತರ ಅಗತ್ಯ ಸೇವೆಗಳ ಸಿದ್ಧತೆ ಮಾಡಲಾಗಿದೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button