Latest

ಅಡುಗೆ ಮನೆಯಲ್ಲಿ ಆರೋಗ್ಯ ನಷ್ಟ -ಡಾ.ವೆಂಕಟರಮಣ ಹೆಗಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಒತ್ತಡದ ಜೀವನದಲ್ಲಿ ಮನುಷ್ಯ ಆರೋಗ್ಯವನ್ನು ಅಡುಗೆ ಮನೆಯಲ್ಲಿ ಕಳೆದುಕೊಂಡು ಆಸ್ಪತ್ರೆಗೆ ಹೋಗುತ್ತಿದ್ದೇವೆ ಎಂದು ಶಿರಸಿಯ ವೇದ ಆರೋಗ್ಯ ಕೇಂದ್ರದ ಡಾ. ವೆಂಕಟರಮಣ ಹೆಗಡೆ ಹೇಳಿದರು.

ಭಾನುವಾರ ನಗರದ ಲಕ್ಷ್ಮೀ ಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಸುವಿಚಾರ ಚಿಂತನ ಹಾಗೂ ಜಗಜ್ಯೋತಿ ಬಸವೇಶ್ವರ ಜಯಂತಿಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಅಡುಗೆ ಮನೆಯಲ್ಲಿ ಸಾಕಷ್ಟು ಔಷಧ ಗುಣಗಳ ಉಪಹಾರವಿದೆ. ಆದರೆ ಒತ್ತಡದ ಸಮಯದಲ್ಲಿ ಹೊರಗಿನ ಎಣ್ಣೆ ಪದಾರ್ಥಗಳ ಸೇವನೆಯಿಂದ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂದು‌ ಕಳವಳ ವ್ಯಕ್ತಪಡಿಸಿದರು.

ಆರೋಗ್ಯ ಎನ್ನುವುದು ಸಂಪತ್ತು ನಾವು ಅದನ್ನ ಕಷ್ಟ ಪಟ್ಟು ಪಡೆಯುವಂತಾಗಿದೆ. ಆರೋಗ್ಯ ಸಂಪತ್ತನ್ನು ಗಳಿಸಲು ನಾವೆ ಕಷ್ಟ ಪಟ್ಟು ಪಡೆದುಕೊಳ್ಳಬೇಕಿದೆ ಎಂದರು.

ಆರೋಗ್ಯ ಎಲ್ಲರಿಗೂ ಮುಖ್ಯವಾಗಿದೆ. ಆ ದೃಷ್ಠಿಯಲ್ಲಿ ಎಲ್ಲರೂ ಗಮನ ಹರಿಸಬೇಕಿದೆ. ಆರು ಗಂಟೆಯ‌ ನಿದ್ರೆ ನಾಲ್ಕು ಲೀಟರ್ ‌ನೀರು‌ ಹಾಗೂ ಎರಡು ಹೊತ್ತು ಊಟ, ಎರಡೂ‌ ಹೊತ್ತು ಧ್ಯಾನ ಮಾಡಿದರೆ ಎಲ್ಲರೂ ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ ಎಂದರು.

ಚಪಾತಿ, ರೊಟ್ಟಿ ತಿಂದು ಉಪವಾಸ ಮಾಡುವ ಬದಲು ಹಣ್ಣು ಹಾಗೂ ಹಣ್ಣಿನ‌ ರಸ ಸೇವಿಸಿ ಉಪವಾಸ ಮಾಡಬೇಕು. ಆರು ಗಂಟೆ ನಿದ್ದೆ ನಾಲ್ಕು ಲೀಟರ್ ನೀರು ಎರಡು ಹೊತ್ತು ಊಟ ಹಾಗೂ ಒಂದು ಬಾರಿ ಯೋಗ ಮಾಡಿದರೆ ಸುಸಜ್ಜಿತ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಆರೋಗ್ಯದ ಹಿತ ದೃಷ್ಠಿಯಿಂದ ಡೈಮಂಡ್ ಕ್ಲಬ್ ಡಬಲ್ ವಿಂಗ್ ಕ್ಲಬ್ ತೆರೆಯುತ್ತಿದ್ದೇವೆ. ಉಪವಾಸದಿಂದ ಆರೋಗ್ಯ ಸಾಧ್ಯ ಹಾಗೂ ಕೊಬ್ಬಿನ ಅಂಶ ಕಡಿಮೆ ಮಾಡಿಕೊಂಡಾಗ ಆರೋಗ್ಯ ಭಾಗ್ಯ ಸಿಗುವುದು ನಿಶ್ಚಿತ. ಡೈಮಂಡ್ ಕ್ಲಬ್ ಗೆ ಯಾವುದೇ ರೀತಿಯ ಶುಲ್ಕವಿರುವುದಿಲ್ಲ. ಉಚಿತವಾಗಿ ಡಬಲ್ ವಿಂಗ್ ಸದಸ್ಯತ್ವ ಪಡೆದುಕೊಳ್ಳಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ 7406853563 ಮೊಬೈಲ್ ಗೆ ಕರೆ ಮಾಡಿ ಸದಸ್ಯತ್ವ ಪಡೆದುಕೊಳ್ಳಬಹದು ಎಂದರು.

ಗಡಿನಾಡು ಭಾಗದಲ್ಲಿ ಹುಕ್ಕೇರಿ ಹಿರೇಮಠ ತನ್ನದೆಯಾದ ಕೊಡುಗೆ ನೀಡುತ್ತಿದೆ. ಶ್ರೀ ಚಂದ್ರಶೇಖರ ‌ಶಿವಾಚಾರ್ಯ ಸ್ವಾಮೀಜಿ ಮಾಡುತ್ತಿರುವ ಸಮಾಜ‌ ಸೇವೆ ಅನನ್ಯ ಎಂದು ಹೇಳಿದರು.

ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ಕಾಯಕವನ್ನು ಅನುಭಾವದ ಎತ್ತರಕ್ಕೆ ಬೆಳೆಸಿದ ಮಹಾತ್ಮರು. ಬಸವನೆಂದರೆ ಯಾರು ಬಿಜ್ಜಳನ ಕರುಣಿಕನೆ ಬಿದ್ದವರನ್ನು ಎತ್ತಲಿಕೆ ದುಡಿದ ಶಿವಯೋಗ ಅನುಭಾವದ ಎತ್ತರಕ್ಕೆ ಕಾಯಕ ತಂದವನಾತ. ಬಸವನೆಂದರೆ ತತ್ವ ಮುಂದುರಾಮ ಎನ್ನುವ ಹಾಗೆ ಬಸವಣ್ಣನವರ ವಿಚಾರಗಳು ಭಾರತೀಯ ವ್ಯವಸ್ಥೆಯನ್ನು ತಿದ್ದುವಲ್ಲಿ‌ ಮಂಚೂಣಿಯಲ್ಲಿದ್ದವು ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದರು.

ಕೆಲಸ ಮಾಡಿದಾಗ ನಾವು ಮುಂದೆ ಬರಲು ಸಾಧ್ಯ. ಕೆಲಸಕ್ಕೆ ಕಾಯಕದ ಆಧ್ಯಾತ್ಮ ಲೇಪನೆ ಕೊಟ್ಟು ಕೆಲಸವು ಕೂಡ ಪವಿತ್ರ ಎಂದು ತೋರಿಸಿದವರು ಬಸವಣ್ಣನವರು. ಬಸವಣ್ಣನವರ ವಿಚಾರಧಾರೆಯನ್ನು ನಾವು ಒಪ್ಪಿದರೆ ಭಾರತ ಸದೃಢವಾಗುತ್ತದೆ. ಆರ್ಥಿಕವಾಗಿ ಸುಭದ್ರತೆಯನ್ನು ತಾಳುತ್ತದೆ. ಅದಕ್ಕಾಗಿ ಬಸವಣ್ಣನವರ ವಿಚಾರವನ್ನು ಹೇಳುವ ಆಲೋಚಿಸುವ ಅವಶ್ಯಕತೆ ಇದೆ.
ನಾವು ಭ್ರಷ್ಟಾಚಾರದಿಂದ‌ ಮುಕ್ತರಾಗಿ ದೇಶವನ್ನು ಕಟ್ಟಿ ಬೆಳೆಸಿದರೆ ಭಾರತ ವಿಶ್ವ ಗುರುವಾಗುವುದರಲ್ಲಿ‌ಎರಡು ಮಾತಿಲ್ಲ. ಆದ್ದರಿಂರ ಬಸವಣ್ಣನವರ ಆದರ್ಶ ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಶಿರಸಿಯ ನಿಸರ್ಗ ಚಿಕಿತ್ಸಾಲಯದಿಂದ ಸುಮಾರು 200 ಜನರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು.

ಅಮೇರಿಕಾದ ಡಾ. ಪ್ರವೀಣ, ಡಾ.ಕಾವ್ಯ, ಡಾ. ಮಮತಾ, ಅಶೋಕ ಪಾಟೀಲ, ಡಾ. ಸೋನಾಲಿ‌ ಸರ್ನೋಬತ್, ಡಾ. ಮೀನಾಕ್ಷಿ ಪಾಟೀಲ, ಬಸಪ್ಪ ಚಂದರಗಿ ಅವರು ತಿಂಗಳ ದಾಸೋಸ ವ್ಯವಸ್ಥೆ ಮಾಡಿದರು. ವೀರುಪಾಕ್ಷಯ್ಯ ನಿರಲಿಗಿಮಠ, ಚಂದ್ರಶೇಖರ ಸ್ವಾಮೀಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button