ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ನಗರದ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಶ್ರೀ ಸಿದ್ಧರಾಮೇಶ್ವರ ಅಗ್ರೊ ಕೇಂದ್ರ ಹಾಗೂ ಎಲ್ಲ ಅಗ್ರೊ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಉದಗಟ್ಟಿ ಪ್ರತಿಷ್ಠಾನದ ಎಲ್ಲ ಹಿರಿಯರ ಸವಿನೆನಪಿಗಾಗಿ ಶ್ರೀಮತಿ ರತ್ನಾಬಾಯಿ ಹಾಗೂ ಶ್ರೀ ಕಲ್ಲಪ್ಪ ಬಾ. ಉದಗಟ್ಟಿ ಸಾಮಾಜಿಕ ಪ್ರತಿಷ್ಠಾನದ ’ಅಮ್ಮ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
೫೦ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜ ಸೇವಕರಿಗೆ ಅಮ್ಮ ಪ್ರಶಸ್ತಿ ಪ್ರದಾನ, ೩೦ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ೫೦ ಹೆಣ್ಣು ಮಕ್ಕಳಿಗೆ ವಸ್ತ್ರದಾನ ಮಾಡಲಾಯಿತು. ರಕ್ತದಾನ ಹಾಗೂ ನೇತ್ರದಾನ ಶಿಬಿರ ಏರ್ಪಡಿಸಲಾಗಿತ್ತು. ಸಿದ್ಧಾರ್ಥ ನೇತ್ರಾಲಯದ ವತಿಯಿಂದ ೧೦೭ ಜನರ ನೇತ್ರ ತಪಾಸಣೆ ನಡೆಸಲಾಯಿತು.
ನಿಡಸೋಶಿಯ ಶಿವಲಿಂಗೇಶ್ವರ ಮಹಾಸ್ವಾಮಿಜಿ ಸಾನಿಧ್ಯ ಹಾಗೂ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಅನಿಲ ಬೆನಕೆ ಕಾರ್ಯಕ್ರಮ ಉದ್ಘಾಟಿಸಿದರು. ಶಿವಪ್ಪ ಶಿರೂರ, ಹನುಮಂತ ನಾಯಿಕ, ಆರ್.ಡಿ. ಕಟಗಲ್ಲ, ಎ.ಕೆ. ಸಿದ್ದಪ್ಪಗೌಡ, ಕು. ಅಕ್ಷತಾ ಪಾಟೀಲ ಹಾಗೂ ಅಗ್ರೊ ಕಂಪನಿಗಳ ಮಾಲಿಕರು, ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ