ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುತ್ ಮತ್ತು ವಿದ್ಯುನ್ಮಾನ್ ವಿಭಾಗವು ವಿದ್ಯುತ್ ವ್ಯವಸ್ಥೆಯಲ್ಲಿ ಅರ್ಥಿಂಗ್ ಮಹತ್ವ ಕುರಿತು ವಿಚಾರ ಸಂಕೀರಣವನ್ನು ಹಮ್ಮಿಕೊಂಡಿತ್ತು.
ಕೆಪಿಟಿಸಿಎಲ್ ನಿವೃತ್ತ ಮುಖ್ಯ ಅಭಿಯಂತರ ಕೆ.ಎಸ್.ಕಟಗಿಹಳ್ಳಿಮಠ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಇವರು ಭೂಸಂಪರ್ಕದ ಮಹತ್ವವನ್ನು ವಿವರಿಸುತ್ತಾ, ವಿದ್ಯುತ್ ಆಘಾತದಿಂದ ರಕ್ಷಿಸಿಕೊಳ್ಳುವ ವಿಧಾನಗಳ ಬಗ್ಗೆ ತಿಳಿಸಿದರು. ಪ್ರಾಂಶುಪಾಲ ಡಾ. ಸಿದ್ಧರಾಮಪ್ಪ ವಿ. ಇಟ್ಟಿ ಅವರು ತಂತ್ರಜ್ಞಾನದಲ್ಲಿ ಮೂಲಭೂತ ಪರಿಕಲ್ಪನೆಗಳ ಮಹತ್ವವನ್ನು ತಿಳಿಸಿದರು.
ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಅಧ್ಯಕ್ಷ ಎಸ್.ಜಿ. ಸಂಬರಗಿಮಠ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಎಮ್.ವಿ.ರಮಣಮೂರ್ತಿ ಸ್ವಾಗತಿಸಿದರು. ವಿಭಾಗದ ಮುಖ್ಯಸ್ಥರಾದ ಡಾ. ಸತ್ಯೇಂದ್ರಕುಮಾರ ಮತ್ತು ವಿದ್ಯಾರ್ಥಿ ಸಂಯೋಜಕರಾದ ಅಭಿಷೇಕ ದಂಡಾವಿ ಉಪಸ್ಥಿತರಿದ್ದರು.