Latest

ಆದೇಶವಾಗಿ 3 ತಿಂಗಳಾದರೂ ಹಾಜರಾಗದ ತಹಸಿಲ್ದಾರ!

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ
ನೂತನ ತಾಲೂಕು ಕಾಗವಾಡಕ್ಕೆ ಇನ್ನೂ ತಹಸಿಲ್ದಾರರ ಆಗಮನವಾಗಿಲ್ಲ. ಇದಕ್ಕೆ ಕಾರಣ ಸರಕಾರದ ನಿರ್ಲಕ್ಷ್ಯವಲ್ಲ, ಬದಲಾಗಿ ಚಿಕ್ಕೋಡಿ ಉಪವಿಭಾಗಾಧಿಕಾರಿಗಳ ಕಾರ್ಯಾಲಯದ ಕೆಲಸದ ಒತ್ತಡ!
ಚಿಕ್ಕೋಡಿ ತಹಸಿಲ್ದಾರ ಕಚೇರಿಯಲ್ಲಿ ಗ್ರೇಡ್ 2 ತಹಸಿಲ್ದಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಪರಿಮಳಾ ದೇಶಪಾಂಡೆ ಅವರನ್ನು ಕಾಗವಾಡ ತಹಸಿಲ್ದಾರರನ್ನಾಗಿ ನೇಮಿಸಿ ಸರಕಾರ ಅಕ್ಟೋಬರ್ 22ರಂದೆ ಆದೇಶ ಹೊರಡಿಸಿದೆ. ಆದರೆ 3 ತಿಂಗಳ ನಂತರ ಜನೆವರಿ 26ರಂದು ಧ್ವಜಾರೋಹಣಕ್ಕೆ ಬಂದಿದ್ದು ಬಿಟ್ಟರೆ ತಹಸಿಲ್ದಾರರು ಕಚೇರಿಯತ್ತ ಸುಳಿಯಲಿಲ್ಲ. ಇದಕ್ಕೆ ಕಾರಣ ಅವರನ್ನು ಚಿಕ್ಕೋಡಿ ಎಸಿ ಕಚೇರಿಯಿಂದ ಬಿಡುಗಡೆ ಮಾಡದಿರುವುದು. 
ಚಿಕ್ಕೋಡಿ ಎಸಿ ಕಚೇರಿಯಲ್ಲಿ ಕೆಲಸದ ಒತ್ತಡ ಬಹಳವಿದೆಯಂತೆ. ಸಿಬ್ಬಂದಿ ಕೊರತೆ ಇದೆಯಂತೆ. ಹಾಗಾಗಿ ಪರಿಮಳಾ ಅವರನ್ನು ಬಿಡುಗಡೆ ಮಾಡಿಲ್ಲವಂತೆ.
ಆದರೆ ಕಾಗವಾಡದ ಜನರ ಗೋಳನ್ನು ಕೇಳುವವರ್ಯಾರು? ತಾಲೂಕಿನಲ್ಲಿ ತೀವ್ರ ಬರಗಾಲವಿದೆ. ಯಾವುದೇ ದಾಖಲೆ ಬೇಕಾದರೂ ಜನ ತಹಸಿಲ್ದಾರ ಕಚೇರಿಗೆ ಬರಬೇಕು. ಆದರೆ ಅಲ್ಲಿ ಜವಾಬ್ದಾರಿಯುತ ಅಧಿಕಾರಿಯೇ ಇಲ್ಲ. 
ಹಾಗಾಗಿ ದೇವರು ಕೊಟ್ಟರೂ ಪೂಜಾರಿ ಬಿಡ ಎನ್ನುವಂತೆ ಸರಕಾರ ಆದೇಶ ಮಾಡಿದರೂ ಎಸಿ ಬಿಡುಗಡೆ ಮಾಡದ್ದರಿಂದಾಗಿ ಕಾಗವಾಡ ಜನ ನಿತ್ಯ ಪರದಾಡುವಂತಾಗಿದೆ. 
 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button