ಪ್ರಗತಿವಾಹಿನಿ ಸುದ್ದಿ
ಇಂಡೋನೇಷ್ಯಾದಲ್ಲಿ ಕಾಣಿಸಿಕೊಂಡಿರುವ ಪ್ರಬಲ ಸುನಾಮಿಯಿಂದ ಕನಿಷ್ಠ 40 ಮಂದಿ ಮೃತಪಟ್ಟು, 700 ಮಂದಿ ಗಾಯಗೊಂಡಿದ್ದಾರೆ. ಸುಂದಾ ಜಲಸಂಧಿಯಲ್ಲಿ 40 ಮಂದಿ ಮೃತಪಟ್ಟು, 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕೆಲವರು ನಾಪತ್ತೆಯಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣೆ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ನೂರಾರು ಕಟ್ಟಡಗಳಿಗೆ ಹಾನಿಯಾಗಿವೆ. ಯಾವುದೇ ಸೂಚನೆಯಿಲ್ಲದೆ ದಕ್ಷಿಣ ಸುಮಾತ್ರ ಹಾಗೂ ಪಶ್ಚಿಮ ತುದಿಯ ಜಾವಾವನ್ನು ಸುನಾಮಿ ಅಪ್ಪಳಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಹುಣ್ಣಿಮೆ ಸಂದರ್ಭದಲ್ಲಿ ಕಾಣಿಸಿಕೊಂಡ ಅಲೆಗಳಲ್ಲಿನ ಅಸಾಮಾನ್ಯ ಏರಿಕೆ, ನೀರಿನ ಆಳದಲ್ಲಿನ ಭೂ ಕುಸಿತ ಹಾಗೂ ಅನಕ್ ಕ್ರಾಕಟೋವಾದಲ್ಲಿನ ಜ್ವಾಲಾಮುಖಿ ಇವೆಲ್ಲವೂ ಸೇರಿ ಜಾವಾ ಹಾಗೂ ಸುಮಾತ್ರಾ ಮಧ್ಯೆ ಇರುವ ಸುಂದಾ ಜಲಸಂಧಿಯಲ್ಲಿ ಸುನಾಮಿ ಸೃಷ್ಟಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ