ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಖಾನಾಪುರ ತಾಲೂಕಿನ ಇದ್ದಿಲಹೊಂಡದ ಇಟ್ಟಂಗಿ ಭಟ್ಟಿಯ ಮೇಲೆ ದಾಳಿ ನಡೆಸಿದ ಕಾರ್ಮಿಕ ಇಲಾಖೆ ಅಧಿಕಾರಿಗಳು 6 ಬಾಲಕಾರ್ಮಿಕರನ್ನು ರಕ್ಷಿಸಿದ್ದಾರೆ.
ಸಹಾಯಕ ಕಾರ್ಮಿಕ ಆಯುಕ್ತ ಡಿ. ಜಿ.ನಾಗೇಶ ನೇತೃತ್ವದಲ್ಲಿ ದಾಳಿ ನಡೆಯಿತು. ಪಾಲಕರೊಂದಿಗೆ ಮಕ್ಕಳು ಸಹ ಇಟ್ಟಂಗಿ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಮಕ್ಕಳನ್ನು ರಕ್ಷಿಸಿ ಬೆಳಗಾವಿಯ ಪ್ರಜ್ವಲ ಅನಾಥ ಮಕ್ಕಳ ಆಶ್ರಮಕ್ಕೆ ಸೇರಿಸಲಾಗಿದ್ದು, ಇಟ್ಟಂಗಿ ಭಟ್ಟಿ ಮಾಲಿಕರಿಗೆ ನೊಟೀಸ್ ನೀಡಲಾಗಿದೆ.
ಈ ಮಕ್ಕಳೆಲ್ಲ ಬೇರೆ ಬೇರೆ ಶಾಲೆಯಲ್ಲಿ ಓದುತ್ತಿದ್ದರೂ ಶಾಲೆಗೆ ಗೈರಾಗಿ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಡಿ.ಜಿ. ನಾಗೇಶ ಪ್ರಗತಿವಾಹಿನಿಗೆ ತಿಳಿಸಿದರು.
ಮಕ್ಕಳನ್ನು ವಸತಿ ಶಾಲೆಗೆ ಸೇರಿಸಲಾಗುವುದು. ಪಾಲಕರು ಮುಚ್ಚಳಿಕೆ ಬರೆದುಕೊಟ್ಟರೆ ಅವರೊಂದಿಗಿದ್ದು ಓದಲು ಅವಕಾಶ ಮಾಡಿಕೊಡಲಾಗುವುದು ಎಂದು ಅವರು ತಿಳಿಸಿದರು.
ಕಾರ್ಮಿಕ ಅಧಿಕಾರಿಗಳಾದ ಮಲ್ಲಿಕಾರ್ಜು ನ ಜೋಗೂರು, ಶ್ರೀಕಾಂತ ಪಾಟೀಲ ಬೀರೇಶ ಮಾರ್ಕರ್, ಬಿಇಓ ಉಮಾ ಬರಗೇರ್, ಸಿಆರ್ ಪಿ ಗೋವಿಂದ ಪಾಟೀಲ, ಚೈಲ್ಡ್ ಲೈನ್ ಸಿಬ್ಬಂದಿ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ