ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
2018-19ನೇ ಸಾಲಿನಲ್ಲಿ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಬೆಳಗಾವಿಯಲ್ಲಿ ಮಾರಾಟವಾಗುವ ಈರುಳ್ಳಿಗೆ ಸರ್ಕಾರದಿಂದ 700 ರೂ.ಗಳ ಮೂಲ ಬೆಲೆಯನ್ನು ನಿಗದಿಪಡಿಸಿದೆ.
ಮಾರುಕಟ್ಟೆಯಲ್ಲಿ ಮಾರಾಟವಾಗುವ ಈರುಳ್ಳಿ ನೈಜ ಬೆಲೆಯ ಮೇಲೆ 200 ರೂ.ಗಳ ಗರಿಷ್ಠ ಮಿತಿಯಲ್ಲಿ ರೈತರಿಗೆ ಪಾವತಿಸಲು ಸರ್ಕಾರ ಆದೇಶಿಸಿದೆ.
ಸದರಿ ಆದೇಶದನ್ವಯ ಈರುಳ್ಳಿ ಬೆಳೆದ ರೈತರು ಬೆಳಗಾವಿ ಕೃಷಿ ಮಾರುಕಟ್ಟೆಯಲ್ಲಿ ಈರುಳ್ಳಿ ಮಾರಾಟ ಮಾಡಲು ಬಂದ ಸಂದರ್ಭದಲ್ಲಿ ನಿಗದಿತ ಅರ್ಜಿ ನಮೂನೆ ಜೊತೆ ತಮ್ಮ ಇತ್ತೀಚಿನ ಜಮೀನಿನ ಪಹಣಿ ಹಾಗೂ ಆಧಾರ ಕಾರ್ಡ್ ಪ್ರತಿಗಳನ್ನು ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾರುಕಟ್ಟೆ ಪ್ರಾಂಗಣದ ಗೇಟ್ನಲ್ಲಿ ತಮ್ಮ ಉತ್ಪನ್ನವನ್ನು ಒಳಗೆ ಕೊಂಡೊಯ್ಯುವ ಸಂದರ್ಭದಲ್ಲಿ ಹಾಜರುಪಡಿಸಬೇಕು.
ಅಲ್ಲಿ ಹಾಜರಿರುವ ಅಧಿಕಾರಿಗಳಿಂದ ಅರ್ಜಿಯನ್ನು ದೃಢೀಪಡಿಸಿಕೊಂಡು ಈರುಳ್ಳಿ ಮಾರಾಟವಾದ ನಂತರ ಈರುಳ್ಳಿ ಮಾರಾಟ ಮಾಡಿದ ಅಂಗಡಿಯ ಮಾಲೀಕರಿಂದ ಈರುಳ್ಳಿ ಮಾರಾಟದ ವಿವರಣೆಯನ್ನು ಅರ್ಜಿಯಲ್ಲಿ ದಾಖಲಿಸಿಕೊಂಡು ದೃಢೀಕರಿಸಿಕೊಳ್ಳಬೇಕು. ನಂತರ ಅರ್ಜಿಯೊಂದಿಗೆ ರೈತರ ಪಟ್ಟಿ ಪ್ರತಿಯನ್ನು ಲಗತ್ತಿಸಿ ಮಾರುಕಟ್ಟೆ ಗೇಟ್ನಲ್ಲಿ ಹಾಜರಿರುವ ಅಧಿಕಾರಿಗಳಿಗೆ ಸಲ್ಲಿಸಿ ಸ್ವೀಕೃತಿ ಪಡೆಯಬೇಕು. ರೈತರು ಸಲ್ಲಿಸುವ ದಾಖಲಾತಿಗಳನ್ನು ತೋಟಗಾರಿಕೆ ಅಧಿಕಾರಿಗಳು ಪರಿಶೀಲಿಸಿ, ನಿಯಮಾನುಸಾರ ಸಂಬಂಧಪಟ್ಟ ರೈತರಿಗೆ ಪ್ರೋತ್ಸಾಹಧನ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
—————————————————————————————————————————————————————————————–
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ