ಕೊಲಂಬೋ: ಶ್ರೀಲಂಕಾದ ಚರ್ಚ್ ಮತ್ತು ಹೊಟೆಲ್ ಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ 200ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಭಾನುವಾರ ಬೆಳಗ್ಗೆ ಈಸ್ಟರ್ ಪ್ರಾರ್ಥನೆಯಲ್ಲಿ ತೊಡಗಿದ್ದ ಸಂದರ್ಭದಲ್ಲಿ ಇಲ್ಲಿನ ಚರ್ಚ್, ಹೋಟೆಲ್ ಗಳಲ್ಲಿ ಸರಣಿ ಬಾಂಬ್ ಸ್ಫೋಟವಾಗಿದೆ. ಕನಿಷ್ಠ 210 ಮಂದಿ ಸಾವನ್ನಪ್ಪಿದ್ದರೆ, 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಕೊಲಂಬೋ ಹಾಗೂ ನೆಗೊಂಬೋ ನಗರಗಳಲ್ಲಿರುವ ಚರ್ಚ್ ಗಳಲ್ಲಿ ಸ್ಫೋಟ ಸಂಭವಿಸಿದೆ.
ಶ್ರೀಲಂಕಾದಲ್ಲಿ ಒಟ್ಟು 5 ಕಡೆಗಳಲ್ಲಿ ಸರಣಿ ಸ್ಫೋಟ ಸಂಭವಿಸಿವೆ. ಈ ಪೈಕಿ ಮೂರು ಚರ್ಚ್ ಗಳಲ್ಲಿ ಹಾಗೂ ಎರಡು ಹೋಟೆಲ್ ಗಳಲ್ಲಿ ಸ್ಫೋಟಗಳಾಗಿವೆ. ಯಾವ ಉಗ್ರ ಸಂಘಟನೆಯೂ ಈ ಸರಣಿ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ.
ಸ್ಫೋಟದ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿ ಕರ್ಫೂ ಜಾರಿಗೊಳಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಬಳಕೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಭಾರತದ ಪ್ರಧಾನಿ ನರೇದ್ರ ಮೋದಿ ಶ್ರೀಲಂಕಾ ಪ್ರಧಾನಿ ಹಾಗೂ ರಾಷ್ಟ್ರಪತಿಗೆ ಕರೆ ಮಾಡಿ ಘಟನೆ ಖಂಡಿಸಿದ್ದಲ್ಲದೆ, ಸಂತಾಪ ಸೂಚಿಸಿದ್ದಾರೆ.
ಘಟನೆಯಲ್ಲಿ ಅಮೇರಿಕಾ, ಬ್ರಿಟನ್ ಸೇರಿದಂತೆ ವಿದೇಶಿ ಪ್ರಜೆಗಳೂ ಹೆಚ್ಚಿಸಂಖ್ಯೆಯಲ್ಲಿ ಸಾವನ್ನಿಪ್ಪಿದ್ದಾರೆ. ಮಂಗಳೂರಿನ ವಿನೀತ್ ಮತ್ತು ರಜಿನಾ ಎನ್ನುವವರಿಬ್ಬರು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ