ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸರಕರ ನಿದ್ರಾವಸ್ಥೆಯಲ್ಲಿದೆ. ಯಾವ ಕೆಲಸವೂ ಆಗುತ್ತಿಲ್ಲ. ಕೇವಲ ಕಾಟಾಚಾರಕ್ಕೆ ಬೆಳಗಾವಿ ಅಧಿವೇಶನ ನಡೆಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ ಬುಧವಾರ ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಯಾವುದೇ ಲೆಕ್ಕಾಚಾರವಿಲ್ಲದೆ ರೈತರ ಸಾಲಮನ್ನಾ ಘೋಷಣೆ ಮಾಡಿದ ಮುಖ್ಯಮಂತ್ರಿ ರೈತರಿಗೆ ಸುಳ್ಳು ಹೇಳುತ್ತಿದ್ದಾರೆ. ಯಾರೊಬ್ಬರ ಖಾತೆಗೂ ಸಾಲಮನ್ನ ಹಣ ಜಮಾ ಆಗಿಲ್ಲ. ಈ ಸರಕಾರ 6 ತಿಗಳು ನಡೆಯುತ್ತದೆ ಎನ್ನುವ ಭರವಸೆ ಸ್ವತಃ ಕುಮಾರಸ್ವಾಮಿಗೂ ಇರಲಿಲ್ಲ ಎಂದು ಅವರು ಹೇಳಿದರು.
ಶಾಸಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹಾಗೂ ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ಅವರು ಜಿಲ್ಲೆಯ ಸಂಸದರು, ಹಾಲಿ ಹಾಗೂ ಮಾಜಿ ಶಾಸಕರು ಮತ್ತು ಬಿಜೆಪಿ ರಾಜ್ಯ ಹಾಗೂ ಜಿಲ್ಲಾ ಪ್ರಮುಖ ಪದಾಧಿಕಾರಿಗಳೊಂದಿಗೆ ರೈತರ ಸಾಲ ಮನ್ನಾ, ಬರಗಾಲ, ಕಬ್ಬು ಬೆಂಬಲ ಬೆಲೆ, ಬೆಳೆ ವಿಮೆ ಹಲವಾರು ಸಮಸ್ಯೆಗಳ ಕುರಿತು
ಚರ್ಚಿಸಿ ಹೋರಾಟದ ರೂಪುರೇಷೆಗಳನ್ನು ನಿರ್ಣಯಿಸಿದರು.
ಸೋಮವಾರ 10 ಡಿಸೆಂಬರ್ 2018ರಂದು ಮದ್ಯಾಹ್ನ 12ಗಂಟೆಗೆ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ರಾಜ್ಯ ಸರ್ಕಾರ ವಿರುದ್ಧ ಹೋರಾಟಕ್ಕಾಗಿ ಒಂದು ಲಕ್ಷ ರೈತರನ್ನು ಹಾಗೂ ಕಾರ್ಯಕರ್ತರನ್ನು ಸೇರಿಸಿ ಬಿಜೆಪಿ ರೈತ ಸಮಾವೇಶವನ್ನು ಬೆಳಗಾವಿಯ ಬಿ.ಎಸ್.ಯಡಿಯೂರಪ್ಪಾ ಮಾರ್ಗದಲ್ಲಿ (ಅಲಾರವಾಡ ಕ್ರಾಸ್ ) ಇರುವ “ಮಾಲಿನಿ ಸಿಟಿ” ಪರಿಸರದಲ್ಲಿ ಆಯೋಜಿಸಲು ತೀರ್ಮಾನ ಕೈಗೊಳ್ಳಲಾಯಿತು.
ಮಾಜಿ ಸಚಿವರು ಹಾಗೂ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಲಕ್ಷಣ ಸವದಿ, ಸಂಸದರಾದ ಸುರೇಶ ಅಂಗಡಿ ಹಾಗೂ ಪ್ರಭಾಕರ ಕೋರೆ ಅವರಿಗೆ ನೇತೃತ್ವ ವಹಿಸಲಾಯಿತು. ಜಿಲ್ಲೆಯ ಹಾಲಿ ಹಾಗೂ ಮಾಜಿ ಶಾಸಕರಿಗೆ ಹಾಗೂ ರಾಜ್ಯ ಮತ್ತು ಜಿಲ್ಲಾ ಕೆಲವು ಪ್ರಮುಖ ಪದಾಧಿಕಾರಿಗಳಿಗೆ ಸಮಾವೇಶದ ವಿವಿಧ ಜವಾಬ್ದಾರಿಗಳನ್ನು ನೀಡಲಾಯಿತು.
ವಿಧಾನಪರಿಷತ್ ವಿರೋಧ ಪಕ್ಷದ ಸಚೇತಕ ಮಹಾಂತೇಶ ಕವಟಗಿಮಠ, ಶಾಸಕರಾದ ಅನಿಲ ಬೆನಕೆ, ಆನಂದ ಮಾಮನಿ, ಮಹಾಂತೇಶ ದೊಡ್ಡಗೌಡರ, ಮಹಾದೇವಪ್ಪ ಯಾದವಾಡ, ಶಂಕರಗೌಡ ಪಾಟೀಲ, ಅಧ್ಯಕ್ಷರಾದ ವಿಶ್ವನಾಥ ಪಾಟೀಲ, ಶಶಿಕಾಂತ ನಾಯಿಕ, ರಾಜೇಂದ್ರ ಹರಕುಣಿ , ರಾಜು ಚಿಕ್ಕನಗೌಡರ ಇತರರು ವೇದಿಕೆಯಲ್ಲಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ