Latest

ಕಿತ್ತೂರಿಗೆ ಸಿಎಂ ಆಗಮನ: ಹೆಲಿಕಾಪ್ಟರ್ ತಪಾಸಣೆ

ಪ್ರಗತಿವಾಹಿನಿ ಸುದ್ದಿ, ಕಿತ್ತೂರು
ಉತ್ತರ ಕನ್ನಡ ಜಿಲ್ಲೆಯ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ ಪ್ರಚಾರಕ್ಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿತ್ತೂರಿಗೆ ಆಗಮಿಸಿದ್ದಾರೆ.
ಹೆಲಿಕಾಪ್ಟರ್ ಮೂಲಕ ಕಿತ್ತೂರಿಗೆ ಆಗಮಿಸಿದ ಸಿಎಂ ಅಲ್ಲಿಂದ ಎಂ.ಕೆ.ಹುಬ್ಬಳ್ಳಿಗೆ ತೆರಳಿದರು. ಈ ವೇಳೆ ಮಾತನಾಡಿದ ಅವರು, ಮಾಧ್ಯಮದವರೆ ನನ್ನ ವಿರೋಧಿಗಳು ಎಂದು ಕಿಡಿಕಾರಿದರು. ಮಂಡ್ಯದಲ್ಲಿ 3 ಲಕ್ಷ  ಮತಗಳ ಅಂತರದಿಂದ ಗೆಲವು ನಿಶ್ಚಿತ  ಎಂದು ಅವರು ಹೇಳಿದರು. ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಜೊತೆಗಿದ್ದರು.
ಇದೇ ವೇಳೆ ಚುನಾವಣಾಧಿಕಾರಿಗಳು ಹೆಲಿಕಾಪ್ಟರ್ ತಪಾಸಣೆ ನಡೆಸಿದರು. 

Related Articles

Back to top button