ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕೋಟೆಕೆರೆ ಸುತ್ತ ಅಳವಡಿಸಲಾಗಿದ್ದ ಲೈಟ್ ಗಳಿಗೆ ಕಲ್ಲೆಸೆದು ಹಾಳು ಮಾಡುತ್ತಿದ್ದ ಇಬ್ಬರನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉಜ್ವಲ್ ನಗರದ ಗುಲ್ಜಾರ ಗಲ್ಲಿಯ ನಯೀಮ್ ರಿಯಾಜ್ ದಫೇದಾರ (19) ಮತ್ತು ನ್ಯೂ ಗಾಧಿನಗರದ ಆದಿಲ್ ಶಾ ಗಲ್ಲಿಯ ತೌಫಿಕ್ ಅಕ್ಬರ್ ಪಟವೇಗಾರ (19) ಬಂಧಿತರು.
ಈ ಸಂಬಂಧ ಭಾನುವಾರ ಪ್ರಕರಣ ದಾಖಲಾಗಿತ್ತು. ಮಾರ್ಕೆಟ್ ಠಾಣೆಯ ಇನಸ್ಪೆಕ್ಟರ್ ವಿಜಯ ಮುರಗುಂಡಿ ಹಾಗೂ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಎಸಿಪಿ ನಾರಾಯಣ ಬರಮನಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ