Latest

ಕೋವಾಡ ದಾಳಿ: 4 ತಂಡ ರಚನೆ

*

ಕೋವಾಡ ಪ್ರಾರ್ಥನಾ ಮಂದಿರದ ಮೇಲೆ ದಾಳಿ ಪ್ರಕರಣ; ಪೊಲೀಸರ ಜಂಟಿ ಕಾರ್ಯಾಚರಣೆ

ಪ್ರಗತಿವಾಹಿನಿ ಸುದ್ದಿ, ಕೋವಾಡ
ಬೆಳಗಾವಿ ಗಡಿಭಾಗ ಮಹಾರಾಷ್ಟ್ರದ ಕೊವಾಡ ಗ್ರಾಮದಲ್ಲಿ ಭಾನುವಾರ ನಡೆದ ಕ್ರೈಸ್ತ ಪ್ರಾರ್ಥನಾ ಸ್ಥಳದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ ಪ್ರಕರಣ ಭೇದಿಸಲು ಕರ್ನಾಟಕ-ಮಹಾರಾಷ್ಟ್ರ ಪೊಲೀಸರು ಜಂಟಿ ಕಾರ್ಯಾಚರಣೆಗೆ ಇಳಿದಿದ್ದಾರೆ.

ಗಡಿ ಭಾಗದಲ್ಲಿ ನಡೆದ ಪ್ರಕರಣವಾಗಿದ್ದರಿಂದ ಬೆಳಗಾವಿ ಪೊಲೀಸ್ ಆಯುಕ್ತ ಡಿ.ಸಿ.ರಾಜಪ್ಪ ಹಾಗೂ ಕೊವಾಡ ಜಿಲ್ಲೆ ಕೊಲ್ಹಾಪುರ ಪೋಲಿಸ್ ವರಿಷ್ಠಾಧಿಕಾರಿ ಅಭಿನವ ದೇಶಮುಖ ನೇತೃತ್ವದಲ್ಲಿ 4 ತಂಡ ರಚಿಸಲಾಗಿದೆ.

ಚಂದಗಡ, ಕೊಲ್ಲಾಪುರ, ಬೆಳಗಾವಿ ಜಿಲ್ಲಾ ಅಪರಾಧ ತನಿಖಾ ವಿಭಾಗ ಮತ್ತು ಕಾಕತಿ ಪೋಲಿಸ್ ಠಾಣೆ ಸೇರಿ 32 ಸಿಬ್ಬಂದಿಗಳ 4 ತಂಡಗಳನ್ನು ರಚಿಸಿದ್ದು ಪ್ರತಿ ತಂಡದಲ್ಲಿ ಎರಡೂ ರಾಜ್ಯದ ತಲಾ 4 ಸಿಬ್ಬಂದಿ ಇದ್ದಾರೆ.

ಹಲ್ಲೆ ನಡೆದದ್ದು ಮಹಾರಾಷ್ಟ್ರ ರಾಜ್ಯದಲ್ಲಾದರೆ ಹಲ್ಲೆ ನಡೆಸಿದವರು ಕರ್ನಾಟಕದವರೆಂಬ ಆರೋಪದ ಮೇರೆಗೆ ಉಭಯ ರಾಜ್ಯದ ಪೋಲಿಸರಿಗೆ ಸವಾಲಾಗಿ ಪರಿಣಮಿಸಿದೆ. ಇನ್ನೊಂದೆಡೆ ಇದು ಹಾಡಹಗಲೆ ನಡೆದ ಪ್ರಕರಣವಾಗಿದ್ದು ,ಆರೋಪಿಗಳು ಯಾವುದೇ ಭಯವಿಲ್ಲದೆ ಗಡಿಭಾಗದಲ್ಲಿ ತಲ್ಲಣ ಮೂಡಿಸಿದ್ದಾರೆ.

ಇದನ್ನು ಗಂಭಿರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಕೊಲ್ಹಾಪುರ ಎಸ್ ಪಿ ತಂಡ ದುಷ್ಕರ್ಮಿಗಳು ಹಲ್ಲೆ ನಡೆಸಿದ ಎಲ್ಲಾ ಸ್ಥಳಗಳನ್ನು ಪರಿಶೀಲಿಸಿ ಮಾಹಿತಿ ಪಡೆದಿದ್ದಾರೆ. ನಂತರ ಬೆಳಗಾವಿಯ ಪೋಲಿಸ್ ಆಯುಕ್ತ ಮತ್ತು ಡಿಸಿಐಬಿ ತಂಡದ ಸಹಾಯ ಪಡೆದು ಇನ್ನಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button