ಪ್ರಗತಿವಾಹಿನಿ ಸುದ್ದಿ, ಬೈಲಹೊಂಗಲ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಗಿರಿಯಾಲ ಗ್ರಾಮದಲ್ಲಿನ ಹಿರಿಯ ಗ್ರಾಮಸ್ಥರೆಲ್ಲರೂ ಸೇರಿಕೊಂಡು ಬಸವ ಜಯಂತಿಯ ನಿಮಿತ್ತವಾಗಿ ಗ್ರಾಮದಲ್ಲಿ ಬಸವೇಶ್ವರ ಪುತ್ಥಳಿಯನ್ನು ಸ್ಥಾಪಿಸಲು ತೀರ್ಮಾನಿಸಿ, ಪೂಜೆ ನೆರವೇರಿಸಿದರು.
ಬಸವೇಶ್ವರ ಸ್ಥಾಪನೆಗೆ ಗ್ರಾಮದ ಧುರೀಣ, ಸಮಾಜ ಸೇವಕ ಶಿವಪ್ಪ ಇಟಗಿ, ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಸದಸ್ಯರಾದ ಸಿದ್ದಪ್ಪ ಗುಂಡ್ಲೂರ, ಮಹಾಂತೇಶ ಇಟಗಿ(ಕೆರಮನಿ) ಅವರು ಭೂಮಿ ಪೂಜೆಯನ್ನು ನೆರವೇರಿಸಿದರು. ಹಿರಿಯರಾದ ಈರಪ್ಪ ಗುಂಡ್ಲೂರ, ಗಂಗಪ್ಪ ಹಳಮನಿ, ರಾಚಪ್ಪ ಕೆರಮಿನಿ, ಅಶೋಕ ಗುಂಡ್ಲೂರ, ರಾಚಪ್ಪ ಹಳಮನಿ, ರುದ್ರಪ್ಪ ಚಿಕ್ಕಪ್ಪದರ, ಕಲ್ಲಪ್ಪ ಕಣವಿ, ಮೆಲಗಿರಿ ಇಟಗಿ, ಬಸ್ಸಪ್ಪ ಹೊಸಮನಿ, ಗ್ರಾಮದ ಕಲ್ಲೇಶ್ವರ ಟ್ರಸ್ಟ್ ಪದಾಧಿಕಾರಿಗಳಾದ ಅಡಿವೆಪ್ಪ ಹಳಮನಿ, ರುದ್ರಪ್ಪ ಹಳಮನಿ, ಗ್ರಾಮದ ಧುರೀಣರಾದ ಬಸವರಾಜ ಯಾದವಾಡ ಈರಣ್ಣ ಪಾರ್ವತಿ, ನಾಗರಾಜ ಹಣಬರ, ಜಗದೀಶ ಬಾವಿಮನಿ ಹಾಗೂ ಗ್ರಾಮದ ಯುವಕರು ಉಪಸ್ಥಿತರಿದ್ದರು.
ಪುತ್ಥಳಿ ಉದ್ಘಾಟನೆಗೆ ಮಾಜಿ ಸಚಿವ ವಿ.ಸೋಮಣ್ಣ, ವಿರಶೈವ ಸಮಾಜದ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ ಮೊದಲಾದವರನ್ನು ಕರೆಸುವ ಸಾಧ್ಯತೆ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ