Latest

ಗೋಕಾಕ ಟಿಎಪಿಸಿಎಂಎಸ್ : ಅವಿರೋಧ ಆಯ್ಕೆ

ಪ್ರಗತಿವಾಹಿನಿ  ಸುದ್ದಿ, ಗೋಕಾಕ :
ಗೋಕಾಕ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಕುಲಗೋಡ ಗ್ರಾಮದ ಅಶೋಕ ಮುದಕಪ್ಪ ನಾಯಿಕ ಹಾಗೂ ಉಪಾಧ್ಯಕ್ಷರಾಗಿ ರಾಜಾಪುರ ಗ್ರಾಮದ ವಿಠ್ಠಲ ಉದ್ದಪ್ಪ ಪಾಟೀಲ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೋಮವಾರ ಸಂಘದ ಕಾರ್ಯಾಲಯದಲ್ಲಿ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ತಲಾ ಒಂದೊಂದು ನಾಮಪತ್ರಗಳು ಸಲ್ಲಿಕೆಯಾಗಿದ್ದರಿಂದ ಅಶೋಕ ನಾಯಿಕ ಅಧ್ಯಕ್ಷರಾಗಿ ಹಾಗೂ ವಿಠ್ಠಲ ಪಾಟೀಲ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಸಹಕಾರಿ ಸಂಘಗಳ ಹಿರಿಯ ನಿರೀಕ್ಷಕ ಬಿ.ಕೆ. ಗೋಖಲೆ ಪ್ರಕಟಿಸಿದರು.
ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಜಾರಕಿಹೊಳಿ ಸಹೋದರರು ಹಾಗೂ ಹಿರಿಯ ಸಹಕಾರಿ ಬಸಗೌಡ ಪಾಟೀಲ(ನಾಗನೂರ) ಅವರ  ಮಾರ್ಗದರ್ಶನದಲ್ಲಿ ಟಿಎಪಿಸಿಎಂಎಸ್ ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆಂದು ನೂತನ ಅಧ್ಯಕ್ಷ ಅಶೋಕ ನಾಯಿಕ ಹೇಳಿದರು.
ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, 1989ರಿಂದ ಇಲ್ಲಿಯವರೆಗೆ ಸತತ 7 ಅವಧಿಗೆ ಗೋಕಾಕ ಟಿಎಪಿಸಿಎಂಎಸ್ ನಿರ್ದೇಶಕನಾಗಿ, 20 ವರ್ಷಗಳಿಂದ ಗೋಕಾಕ ಎಪಿಎಂಸಿ ನಿರ್ದೇಶಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಅಶೋಕ ನಾಯಿಕ ಹೇಳಿದರು.
ಉಪಾಧ್ಯಕ್ಷ ವಿಠ್ಠಲ ಪಾಟೀಲ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ ಮಾತನಾಡಿದರು.
ಸಂಘದ ನಿರ್ದೇಶಕರಾದ ಬಸಗೌಡ ಪಾಟೀಲ(ಮೆಳವಂಕಿ), ಈಶ್ವರ ಬೆಳಗಲಿ, ಗುರುನಾಥ ಕಂಕಣವಾಡಿ, ಸುಭಾಸ ಹುಕ್ಕೇರಿ, ಗಂಗವ್ವ ಜೈನ್, ಲುಬನಾ ದೇಸಾಯಿ, ಪ್ರಭಾಕರ ಬಂಗೆನ್ನವರ, ವೆಂಕನಗೌಡ ಪಾಟೀಲ, ಕೆಂಚಪ್ಪ ಮಂಟೂರ, ಸುರೇಶ ಗುಡ್ಡಾಕಾರ, ನಾಗಪ್ಪ ಶೇಖರಗೋಳ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button