Latest

ಚಿರತೆ ಚರ್ಮ ಮಾರಾಟ: ಮೂವರ ಬಂಧನ

*

ಪ್ರಗತಿವಾಹಿನಿ ಸುದ್ದಿ, ಯಲ್ಲಾಪುರ

ಚಿರತೆ ಚರ್ಮ ಮಾರಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಘಟನೆ ನಡೆದಿದ್ದು, ಬೆಂಗಳೂರಿನ ಅರಣ್ಯ ಇಲಾಖೆ ವಿಚಕ್ಷಣಾ ದಳದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಮೂವರನ್ನು ಬಂಧಿಸಲಾಗಿದೆ.
ಬೈಕ್ ನಲ್ಲಿ ಚಿರತೆ ಚರ್ಮ ಸಾಗಿಸುತ್ತಿದ್ದ ವೇಳೆ ಕುಮಾರ ಯಲ್ಲಾಪುರ, ಗುರುಪ್ರಸಾದ ಆನಗೋಡ್, ರತೀಕ್ ಮೈಸೂರು ಸೆರೆ ಸಿಕ್ಕಿದರು.ಚಿರತೆ ಚರ್ಮ ಬೈಕ್ ನಲ್ಲಿ ಸಾಗಿಸುತ್ತಿ‌ದ್ದಾಗ ದಾಳಿ ನಡೆಸಿದ ವಿಚಕ್ಷಣಾ ದಳದ ಪಿ.ಎಸ್.ಐ ಎಂ.ಎಸ್.ರಾಮಮೂರ್ತಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button