Latest

ಜೆಎನ್ಎಂಸಿ 1975ರ ವಿದ್ಯಾರ್ಥಿಗಳಿಂದ ಗುರು ನಮನ

 

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕೆಎಲ್ಇ ಜೆಎನ್ಎಂಸಿ ಮಹಾವಿದ್ಯಾಲಯದಲ್ಲಿ 1975 ನೇ ಸಾಲಿನಲ್ಲಿಯ ಹಳೆ ವಿದ್ಯಾರ್ಥಿಗಳೆಲ್ಲ ಸೇರಿ ಸಂತೋಷ ಕೂಟವನ್ನು ಹಮ್ಮಿಕೊಂಡಿದ್ದರು.
ಡಾ. ಪ್ರಭಾಕರ ಕೋರೆ ಕಾರ‍್ಯಕ್ರಮವನ್ನು ಉದ್ಘಾಟಿಸಿ, ಹೊರದೇಶದಲ್ಲಾಗಿರುವ ವೈದ್ಯಕೀಯ ಒಳ್ಳೆಯ ಬೆಳವಣಿಗೆಗಳನ್ನು ನಮ್ಮ ದೇಶಕ್ಕೆ ಪರಿಚಯ ಮಾಡಿಕೊಟ್ಟಲ್ಲಿ ವೈದ್ಯರಾದ ತಾವು ದೇಶಕ್ಕೆ ಅಪರೂಪದ ಸೇವೆ ಸಲ್ಲಿಸಿದಂತೆ ಎಂದು ವಿದೇಶದಲ್ಲಿರುವ ವೈದ್ಯರಲ್ಲಿ ಕೇಳಿಕೊಂಡರು.

ಡಾ. ಬಿ. ಆರ್. ದೇಸಾಯಿ, ಡಾ. ಜೋಗಳೇಕರ, ಡಾ. ಬಿ. ಬಿ. ಪುಟ್ಟಿ, ಡಾ. ಎನ್. ಡಿ. ಜಿಂಗಾಡೆ, ಡಾ. ಪಿ. ಎ. ಪಾಟೀಲ, ಡಾ. ಎ. ಎಸ್. ಗೋದಿ, ಡಾ. ಎ. ಎಸ್. ವಂಟಮೂಟೆ, ಡಾ. ಎ. ವ್ಹಿ ಧಡೇದ, ಡಾ. ಅಂಟಿನ, ಡಾ. ಬಿ. ಆರ್. ನೀಲಗಾರ, ಡಾ. ಬಿ. ಎಸ್. ಕೋಡ್ಕಿಣಿ, ಡಾ. ಬಿ. ಸಿದ್ಧರಾಮಪ್ಪ, ಡಾ. ಸಿ. ಎಸ್. ಪಾಟೀಲ, ಡಾ. ಡಿ. ಎಸ್. ಕುಚಬಾ, ಡಾ. ಜಿ. ಎಮ್. ವಾಲಿ, ಡಾ. ಎಚ್. ಬಿ. ರಾಜಶೇಖರ, ಡಾ, ಹೇಮಶೆಟ್ಟರ್, ಡಾ. ಕುಚಬಾಳ, ಡಾ. ಎಂ. ಎಚ್. ಇನಾಮದಾರ, ಡಾ. ನರಗುಂದ, ಡಾ. ಪಿ. ಆರ್. ಮಲ್ಲೂರ, ಡಾ. ವಿ. ಬಿ. ಧಡೇದ, ಮುಂತಾದವರು ಭಾರತವಷ್ಟೇ ಅಲ್ಲದೆ ಯು.ಎಸ್.ಎ., ಮಲೇಷಿಯಾ ಮಂತಾದ ದೇಶಗಳಿಂದ ಜೆ.ಎನ್. ಎಂ. ಸಿ. ಮಹಾವಿದ್ಯಾಲಯದಲ್ಲಿ (1975 ನೇ ಸಾಲಿನ ವಿದ್ಯಾರ್ಥಿಗಳು) ಸೇರಿದ್ದರು.
ಡಾ. ವಿ. ಡಿ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಡಾ. ಪ್ರಭಾಕರ ಕೋರೆಯವರ ಸಮ್ಮುಖದಲ್ಲಿ ಹಳೆ ವಿದ್ಯಾರ್ಥಿಗಳೆಲ್ಲ ಸೇರಿ ತಮಗೆ ಶಿಕ್ಷಣ ನೀಡಿದ ಕಲಿಸಿದ ಗುರುಗಳಿಗೆ ನೆನಪಿನ ಕಾಣಿಕೆ ನೀಡಿ, ಶಾಲು ಹೊದಿಸಿ ಗೌರವಿಸಿದರು. ಗುರುಗಳ ಹಾಗೂ ತಮ್ಮ ನಡುವಿನ ಅನ್ಯೋನ್ಯ ಸಂಬಂಧಗಳ ಹಳೆ ನೆನಪುಗಳನ್ನು ವಿದ್ಯಾರ್ಥಿಗಳು ಹಂಚಿಕೊಂಡರು. ತಾವು ಕಲಿತ ಕಾಲೇಜು ಆವರಣ, ಹಾಸ್ಟೇಲ್ ಹಾಗೂ ಹಾಸ್ಪಿಟಲ್ ಗಳಿಗೆ ಭೇಟಿಕೊಟ್ಟು ತಮ್ಮ ನೆನಪುಗಳನ್ನು ಮರುಕಳಿಸಿಕೊಂಡು ಸಂತಸಪಟ್ಟರು.
1975 ರಲ್ಲಿ ಕಾಲೇಜಿನ ಪ್ರಾಚಾರ್ಯರಾಗಿದ್ದ ಖ್ಯಾತ ಮಕ್ಕಳ ತಜ್ಞ ಡಾ.ಎಸ್. ಜಿ. ದೇಸಾಯಿ ಅವರಿಗೀಗ 92 ವರ್ಷ. ಅವರಿಗೆ ಕಾರ‍್ಯಕ್ರಮದಲ್ಲಿ ಪಾಲ್ಗೊಳ್ಳಲಾಗಲಿಲ್ಲ. ಎಲ್ಲ ವಿದ್ಯಾರ್ಥಿಗಳು ಸೇರಿ ಸದಾಶಿವನಗರದಲ್ಲಿರುವ ಅವರ ಮನೆಗೆ ಹೋಗಿ ಅವರನ್ನು ಗೌರವಿಸಿದರು.
ಡಾ, ಶಶಿಧರ ಮೇಸ್ತ್ರಿ, ಡಾ. ಸುರೇಶ ಕರ್ಲಟ್ಟಿ, ಹಾಗೂ ಡಾ. ಬಸವರಾಜ ಪಟ್ಟಣಶೆಟ್ಟಿ ಇವರ ಮುಂದಾಳತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button