ಪ್ರಗತಿವಾಹಿನಿ ಸುದ್ದಿ, ನವದೆಹಲಿ
ಬಹುನಿರೀಕ್ಷಿತ ಅಯೋಧ್ಯೆ ರಾಮಮಂದಿರ ವಿವಾದದ ವಿಚಾರಣೆ ಜ.29ರಿಂದ ಸುಪ್ರಿಂ ಕೋರ್ಟ್ ನಲ್ಲಿ ವಿಚಾರಣೆ ಆರಂಭವಾಗಲಿದೆ.
ವಿಚಾರಣೆ ದಿನಾಂಕ ನಿಗದಿಪಡಿಸಲು ಗುರುವಾರ ಪಂಚ ಸದಸ್ಯರ ಪೀಠ ಈ ನಿರ್ಧಾರ ತೆಗೆದುಕೊಂಡಿದ್ದು, ವಿಚಾಣೆ ನಿರಂತರವಾಗಿ ನಡೆಯಲಿದೆಯೋ ಅಥವಾ ಪ್ರತಿಬಾರಿ ದಿನಾಂಕ ನಿಗದಿಪಡಿಸಲಾಗುವುದೋ ಎನ್ನುವುದು ಸ್ಪಷ್ಟವಾಗಿಲ್ಲ.
ಈ ಮಧ್ಯೆ, ಪಂಚಸದಸ್ಯಪೀಠದಲ್ಲಿ ನ್ಯಾಯಮೂರ್ತಿ ಉದಯ ಲಲಿತ ಇರಬಾರದೆಂದು ಮುಸ್ಲಿಂ ಪರ ವಕೀಲ ರಾಜೀವ ಧವನ್ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಅವರು ವಿಚಾರಣೆಯಿಂದ ಹಿಂದೆ ಸರಿದರು. ಹಾಗಾಗಿ ಈಗ ಪೀಠವನ್ನು ಪುನರ್ ರಚಿಸಬೇಕಿದೆ. 29ರೊಳಗೆ ಪೀಠ ಪುನರ್ ರಚನೆಯಾಗಿ ವಿಚಾರಣೆ ಆರಂಭವಾಗುವುದರಿಂದ ಬರಲಿರುವ ಲೋಕಸಭೆ ಚುನಾವಣೆಗೆ ಮೊದಲು ತೀರ್ಪು ಬರಲಿದೆಯೋ ಅಥವಾ ವಿಳಂಬವಾಗಲಿದೆಯೋ ಕಾದು ನೋಡಬೇಕಿದೆ.
ರಾಮಮಂದಿರ ನಿರ್ಮಾಣ ಸುಪ್ರಿಂ ಕೋರ್ಟ್ ತೀರ್ಪಿನ ನಂತರವೇ ನಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಈಚೆಗೆ ತಿಳಿಸಿದ್ದನ್ನು ಇದಕ್ಕೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ