Kannada NewsKarnataka NewsNationalPolitics

ನಾನು ವಿಡಿಯೋ ಮಾಡಿಲ್ಲ, ನನಗೆ ಏನು ಗೊತ್ತಿಲ್ಲ: ಎಸ್ಐಟಿ ಮಂದೆ ಪ್ರಜ್ವಲ್ ರೇವಣ್ಣ

ಪ್ರಗತಿವಾಹಿನಿ ಸುದ್ದಿ: ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಪ್ರಜ್ವಲ್‌ ರೇವಣ್ಣ ಎಸ್‌ಐಟಿ ವಶದಲ್ಲಿ ಇದ್ದು, “ನಾನು ವಿಡಿಯೋ ಮಾಡಿಲ್ಲ” ಎಂದು ಎಸ್‌ಐಟಿಗೆ ಉತ್ತರಿಸಿದ್ದಾರೆ ಎನ್ನಲಾಗಿದೆ. 

ಪ್ರಕರಣ ಸಂಬಂಧ ನನಗೆ ಏನೂ ಗೊತ್ತಿಲ್ಲ. ವಿಡಿಯೊಗಳಲ್ಲಿ ನಾನು ಎಲ್ಲಿಯೂ ಇಲ್ಲ. ನಾನು ಯಾವುದೇ ವಿಡಿಯೊ ಮಾಡಿಲ್ಲ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ವೇಳೆ ಕೆಲವರ ಫೋಟೋಗಳನ್ನು ಅಧಿಕಾರಿಗಳು ತೋರಿಸಿದ್ದು, ಕೆಲವರ ಪರಿಚಯವವಿದೆ ಎಂದು ಪ್ರಜ್ವಲ್‌ ರೇವಣ್ಣ ತಿಳಿಸಿದ್ದಾರೆ ಎನ್ನಲಾಗಿದೆ.‌

ನಾನು ರಾಜಕಾರಣಿ ಹೀಗಾಗಿ ಕೆಲವರ ಪರಿಚಯವಿದೆ. ಆದರೆ ನನಗೂ ಅವರಿಗೂ ಯಾವುದೇ ಸಂಬಂಧವಿಲ್ಲ. ಇದು ರಾಜಕೀಯವಾಗಿ ನನ್ನ ತುಳಿಯಲು ಷಡ್ಯಂತ್ರವಾಗಿದೆ. ನಾನು ಯಾವುದೇ ಕೆಟ್ಟ ಕೆಲಸಗಳನ್ನೂ ಮಾಡಿಲ್ಲ ಎಂದಿದ್ದಾರೆ.

Home add -Advt

ಹಳೆಯ ಮೊಬೈಲ್‌ ಕಳೆದು ಹೋದ ಬಗ್ಗೆ ವಿಚಾರಣೆ ಮಾಡಲಾಗಿದ್ದು, ನಿಜವಾಗಿಯೂ ಹಳೆಯ ಮೊಬೈಲ್‌ ಕಳೆದುಹೋಗಿದೆ. ಫೋನ್‌ ಹುಡುಕಿ ಕೊಡುವಂತೆ ದೂರು ಕೊಡಲಾಗಿತ್ತು. ಆದರೆ ಇದುವರೆಗೂ ಮೊಬೈಲ್‌ ಬಗ್ಗೆ ಸುಳಿವು ಇಲ್ಲ ಎಂದು ಹೇಳಿದ್ದಾರೆ.

ಇನ್ನೂ ಅನೇಕ ಪ್ರಶ್ನೆಗಳು ಎಸ್ಐಟಿ ಅಧಿಕಾರಿಗಳು ಕೇಳಿದ್ದಾರೆ. ಆದರೆ ಪ್ರಜ್ವಲ್‌ ರೇವಣ್ಣ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿಲ್ಲ ಎನ್ನಲಾಗಿದೆ.

Related Articles

Back to top button