Kannada NewsKarnataka NewsLatest

ಬೆಳಗಾವಿ ಬಳಿ ತಲ್ವಾರ್ ತೋರಿಸಿ ವ್ಯಕ್ತಿಯಿಂದ ಚಿನ್ನಾಭರಣ ಸುಲಿಗೆ; ಬೆಚ್ಚಿ ಬೀಳಿಸಿದ ಘಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ– ತಾಲೂಕಿನ ಬೆಳಗುಂದಿ – ಕುದ್ರೆಮನಿ ಮಧ್ಯೆ ವ್ಯಕ್ತಿಯೋರ್ವನಿಂದ 6 ಲಕ್ಷ ರೂ. ಮೌಲ್ಯದ ಚಿನ್ನಾಭರಣ  ಸುಲಿಗೆ ಮಾಡಲಾಗಿದೆ.

ಕುದ್ರೆಮನಿಯಲ್ಲಿ ಚಿನ್ನದ ಅಂಗಡಿ ಹೊಂದಿರುವ ಬೆಳಗುಂದಿಯ ಸುಭಾಷ್ ಕಾಕತಿಕರ್ ಎನ್ನುವವರು ಸೋಮವಾರ ರಾತ್ರಿ ಅಂಗಡಿ ಮುಚ್ಚಿ ಮನೆಗೆ ತೆರಳುತ್ತಿರುವಾಗ ಅಡ್ಡಗಟ್ಟಿದ ದುಷ್ಕರ್ಮಿಗಳು ಅವರಿಗೆ ಮಾರಕಾಸ್ತ್ರಗಳನ್ನು ತೋರಿಸಿ ಅವರ ಬಳಿ ಇದ್ದ ಚಿನ್ನಾಭರಣಗಳನ್ನು ಕಿತ್ತುಕೊಂಡು ಹೋಗಿದ್ದಾರೆ.

Home add -Advt

ಸುಭಾಷ್ ಅವರು ಬೆಳಗುಂದಿಯಲ್ಲಿ ಮನೆ ಹೊಂದಿದ್ದಾರೆ. ಕುದ್ರೆಮನಿಯಲ್ಲಿ ಚಿನ್ನಾಭರಣ ಅಂಗಡಿ ಹೊಂದಿದ್ದಾರೆ. ನಿತ್ಯ ಅವರು ಬೆಳಗ್ಗೆ ಬಂದು ರಾತ್ರಿ ವಾಪಸ್ಸಾಗುತ್ತಾರೆ. ಎಂದಿನಂತೆ ಸೋಮವಾರ ರಾತ್ರಿ ಅಂಗಡಿ ಬಂದ್ ಮಾಡಿ ಬ್ಯಾಗ್ ನಲ್ಲಿ ಚಿನ್ನಾಭರಣಗಳನ್ನು ತುಂಬಿಕೊಂಡು ಮನೆಗೆ ತೆರಳುತ್ತಿದ್ದರು.

ಈ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಅಡ್ಡಗಟ್ಟಿ ತಲ್ವಾರ್ ತೋರಿಸಿ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಸುಭಾಷ್ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬೆಳಗಾವಿ: ಮತ್ತೋರ್ವ ಯುವತಿ ನಾಪತ್ತೆ

 

 

Related Articles

Back to top button