*ನವೆಂಬರ್ ಕ್ರಾಂತಿ: ಸಚಿವರು, ಶಾಸಕರಿಗೆ ಪತ್ರ ಬರೆದು ಡೆಡ್ ಲೈನ್ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಚರ್ಚೆ ಬೆನ್ನಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಸಚಿವರು, ಶಾಸಕರಿಗೆ ಪತ್ರ ಬರೆದು ಡೆಡ್ ಲೈನ್ ನೀಡಿದ್ದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಶಾಸಕರು, ಸಚಿವರು, ಡಿಸಿಸಿ ಅಧ್ಯಕ್ಷರು, ಬಿಸಿಸಿಗಳಿಗೆ ಪತ್ರ ಬರೆದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ನವೆಂಬರ್ 20ರ ಡೆಡ್ ಲೈನ್ ನೀಡಿದ್ದಾರೆ. ನವೆಂಬರ್ 20ಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರ್ಣಗೊಳ್ಳಲಿದೆ. ನವೆಂಬರ್ 20ರೊಳಗೆ ರಾಜ್ಯದ ಎಲ್ಲಾ ಡಿಸಿಸಿಗಳು, ಬಿಸಿಸಿಗಳು ಸ್ವಂತ ಕಚೇರಿ ಹೊಂದಲು ಡಿಸಿಎಂ ಸೂಚಿಸಿ ಗಡುವು ನೀಡಿದ್ದಾರೆ.
ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಲು ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಆಗಮಿಸಲು ಒಪ್ಪಿದ್ದು, ಡೆಡ್ ಲೈನ್ ಒಳಗೆ ಕಚೇರಿಗಳ ಎಲ್ಲಾ ಪ್ರಕ್ರಿಯೆ ಮುಗಿಸಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ನವೆಂಬರ್ ನಲ್ಲಿ ರಾಜ್ಯ ಸಚಿವ ಸಂಪುಟ ರಚನೆ ಖಚಿತವಾಗಿದೆ, ನವೆಂಬರ್ 15ರಂದು ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ. ಈನಡುವೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಚಿವರು, ಶಾಸಕರಿಗೆ ನವೆಂಬರ್ 20ರ ಡೆಡ್ ಲೈನ್ ನೀಡಿ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.



