Kannada NewsKarnataka NewsLatest

*ನೋಟಿಸ್ ಕೊಡಲು ಮನೆಗೆ ಹೋಗಿದ್ದ ಕೋರ್ಟ್ ಅಮೀನ್ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ*

ಪ್ರಗತಿವಾಹಿನಿ ಸುದ್ದಿ: ಕೋರ್ಟ್ ನೋಟಿಸ್ ಕೊಡಲು ಮನೆಗೆ ಹೋಗಿದ್ದ ಕೋರ್ಟಿನ ಅಮೀನ್ ಕಣ್ಣಿಗೆ ಮಹಿಳೆಯೊಬ್ಬರು ಖಾರದಪುಡಿ ಎರಚಿ ಅಮಾನವೀಯವಾಗಿ ವರ್ತಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಕಾಳೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಕೋರ್ಟ್ ಅಮೀನ್ ಶಂಕರೇಗೌಡ ಎಂಬುವವರ ಕಣ್ಣಿಗೆ ಮಹಿಳೆ ಸಾಕಮ್ಮ ಖಾರದಪುಡಿ ಎರಚಿದ್ದಾರೆ. ಕಣ್ಣಿಗೆ ಖಾರದ ಪುಡಿ ಬಿದ್ದು ಶಂಕರೇಗೌಡ ಪರದಾಡಿದ್ದಾರೆ.

Home add -Advt

ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನೋಟಿಸ್ ಕೊಡಲು ಅಮೀನ್ ಶಂಕರೇಗೌಡ ಮನೆಗೆ ತೆರಳಿದ್ದರು. ಈ ವೇಳೆ ಸಾಕಮ್ಮ ಎಂಬ ಮಹಿಳೆ ಕೋರ್ಟ್ ಅಮೀನ್ ಮೇಲೆ ಖಾರದಪುಡಿ ದಾಳಿ ನಡೆಸಿದ್ದಾರೆ. ಕೋರ್ಟ್ ನೋಟಿಸ್ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೇ ಶಂಕರೇಗೌಡ ಮನೆಗೆ ತೆರಳಿದ್ದರು ಎಂದು ಹೇಳಲಾಗುತ್ತಿದೆ. ಮಹಿಳೆ ಕೋರ್ಟ್ ಅಮೀನ್ ಕಣ್ಣಿಗೆ ಖಾರದಪುಡಿ ಎರಚಲು ನಿಖರ ಕಾರಣವೇನು? ಎಂಬುದು ತನಿಖೆ ಬಳಿಕವೇ ತಿಳಿದುಬರಬೇಕಿದೆ.

Related Articles

Back to top button