*ಶಿವಗಂಗೆ ಬೆಟ್ಟಕ್ಕೆ ಟ್ರೆಕಿಂಗ್ ಗೆ ಹೋಗಿದ್ದ ಯುವಕ ನಾಪತ್ತೆ ಪ್ರಕರಣ: ಬೆಟ್ಟದಿಂದಲೇ ಬೇರೆ ದಾರಿಯಲ್ಲಿ ಎಸ್ಕೇಪ್ ಆದನಾ ಟೆಕ್ಕಿ?*

ಫ್ರಗತಿವಾಹಿನಿ ಸುದ್ದಿ: ಶಿವಗಂಗೆ ಬೆಟ್ಟಕ್ಕೆ ಬಂದಿದ್ದ ಅದ್ವೈತ್ ಉಪಾಧ್ಯಾಯ ನಾಪತ್ತೆಯಾಗಿ ಐದು ದಿನಗಳು ಕಳೆದರೂ ಈವರೆಗೂ ಆತನ ಪತ್ತೆಯಾಗಿಲ್ಲ. ಇಂದು ಕೂಡ ನೆಲಮಂಗಲ ಹಾಗೂ ಡಾಬಸ್ ಪೇಟೆ ಪೊಲೀಸರು ಅದ್ವೈತ್ ಗಾಗಿ ಶೋಧಕಾರ್ಯಾಚರಣೆ ಮುಂದುವರೆಸಿದ್ದಾರೆ. ಈನಡುವೆ ಪೊಲೀಸರಿಗೆ ಆತನ ಬಗ್ಗೆ ಕೆಲ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ
ಅದ್ವೈತ್ ಹೈಲಿ ಟ್ಯಾಲೆಂಟೆಡ್ ಹ್ಯಾಕರ್. ಅಲ್ಲದೇ ಆತನಿಗೆ ಹುಡುಗಿಯರ ಶೋಕಿ ಇತ್ತು. ಅದ್ವೈತ್ ಇತ್ತೀಚೆಗೆ ಪ್ರಾಪ್ತಿ ಚೌಹಾಣ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಆದರೆ ಬೇರೊಂದು ಹುಡುಗಿಯ ಜೊತೆ ಚಾಟಿಂಗ್ ನಲ್ಲಿದ್ದ ಎಂಬುದು ಬಯಲಾಗಿದೆ.
ಶಿವಗಂಗೆ ಬೆಟ್ಟ ಹತ್ತುತ್ತಿದ್ದಾಗ ತಾನು ಟ್ರೆಕ್ಕಿಂಗ್ ಮಾಡುತ್ತಿರುವುದಾಗಿ ನೆಪಕ್ಕೆ ಪ್ರಾಪ್ತಿ ಚೌಹಾಣ್ ಗೆ ಫೋಟೊ ಕಳುಹಿಸಿದ್ದ. ಅಲ್ಲದೇ ಕಳೆದ ತಿಂಗಳು ಅದ್ವೈತ್ ಇದೇ ಬೆಟ್ಟಕ್ಕೆ ತನ್ನ ಗರ್ಲ್ ಫ್ರೆಂಡ್ ಜೊತೆ ಬಂದಿದ್ದಾನೆ. ಪೊಲೀಸರು ಶಿವಗಂಗೆ ಬೆಟ್ಟದ ಶಾಂತಲಾ ಡ್ರಾಪ್ ನಲ್ಲಿ ಬಹುತೇಕ ಶೋಧಕಾರ್ಯಾಚರಣೆ ಪೂರ್ಣಗೊಳಿಸಿದ್ದಾರೆ. ಆದರೆ ಎಲ್ಲಿಯೂ ಅದ್ವತ್ ಪತ್ತೆಯಾಗಿಲ್ಲ. ಆದಾಗ್ಯೂ ಇಂದು ಕೂಡ ಶೋಧಕಾರ್ಯಾಚರಣೆ ಮುಂದುವರೆಸಿದ್ದಾರೆ.
ಕಳೆದ ಐದು ದಿನಗಳಿಂದ ನಿರಂತರ ಶೋಧ ನಡೆಸಿದರೂ ಅದೈತ್ ಪತ್ತೆಯಾಗದಿರುವುದು ಆತ ಆತ್ಮಹತ್ಯೆ ಮಾಡಿಕೊಂಡಿಲ್ಲದಿರಬಹುದು. ಶಿವಗಂಗೆ ಬೆಟ್ಟ ಹತ್ತಿ ಇಳಿಯುವಾಗ ಬೇರೆ ಮಾರ್ಗದಲ್ಲಿ ಎಸ್ಕೇಪ್ ಆಗಿರಬಹುದು ಎಂಬ ಅನುಮಾನ ಪೊಲೀಸರಿಗೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.


