Latest

ಪ್ರತಿಭಟನಾ ನಿರತರಿಗೆ ಪಿಎಸ್ಐ ಕಪಾಳಮೋಕ್ಷ; ವೀಡಿಯೋ ವೈರಲ್

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ
ಪಿಎಸ್ಐ ಒಬ್ಬರು ಪ್ರತಿಭಟನಾ ನಿರತರಿಗೆ ಕಪಾಳ ಮೋಕ್ಷ  ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಾರೂಗೇರಿ ಪಿ ಎಸ್ ಐ ಕುಮಾರ ಹಿತ್ತಲಮನಿ 2 ದಿನಗಳ ಹಿಂದೆ ಹಾರೂಗೇರಿ ಪುರಸಭೆ ಎದುರು ಪಹಣಿ ಪತ್ರ ವಿಚಾರವಾಗಿ ಪ್ರತಿಭಟನೆ ನಡೆಸುತ್ತಿದ್ದ ಜನಸಾಮಾನ್ಯರ ಮೇಲೆ ಅನುಚಿತವಾಗಿ ವರ್ತಿಸಿದರೆನ್ನುವ ಆರೋಪ ಕೇಳಿ ಬಂದಿದ್ದು, ಈ ಕುರಿತ ವೀಡಿಯೋ ವೈರಲ್ ಆಗಿದೆ.
ಪುರಸಭೆ ಮುಖ್ಯಾಧಿಕಾರಿ ಹಾಗೂ ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕುಮಕಿ ನಡೆಯುತ್ತಿದ್ದ ಸಂದರ್ಭದಲ್ಲಿ ಪಿ ಎಸ್ ಐ ಹಿತ್ತಲಮನಿ ಮಧ್ಯ ಪ್ರವೇಶಿಸಿ,
ಪ್ರತಿಭಟನಾ ನಿರತ ಇಬ್ಬರಿಗೆ ಕಪಾಳ ಮೋಕ್ಷ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.
ಜನಸಾಮಾನ್ಯರ ಮೇಲೆ ಬಲ‌ಪ್ರಯೋಗ ಮಾಡಿದ ಪಿ ಎಸ್ ಐ ವಿರುದ್ಧ ಆಕ್ರೋಶವ್ಯಕ್ತವಾಗುತ್ತಿದ್ದು, ರಕ್ಷಣೆ ನೀಡಬೇಕಾದ ಅಧಿಕಾರಿಗಳೇ ಕಾನೂನನ್ನು ಉಲ್ಲಂಘನೆ ಮಾಡಿದ್ದು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆನ್ನುವ ಆಗ್ರಹ ಕೇಳಿಬಂದಿದೆ.

Related Articles

Back to top button