ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬಹುನಿರೀಕ್ಷಿತ ಬೆಳಗಾವಿಯ ರೈಲ್ವೆ ಮೇಲ್ಸೆತುವೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾದ ಮಂಗಳವಾರ ಸಂಚಾರಕ್ಕೆ ಮುಕ್ತವಾಗಲಿದೆ.
ಲೋಕಸಭಾ ಸದಸ್ಯ ಸುರೇಶ ಅಂಗಡಿ ಮತ್ತು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಸೇತುವೆಯನ್ನು ಉದ್ಘಾಟಿಸುವರು. ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಮೇಯರ್ ಬಸಪ್ಪ ಚಿಕ್ಕಲದಿನ್ನಿ, ರೈಲ್ವೆ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಇದರಿಂದಾಗಿ ಕಾಂಗ್ರೆಸ್ ರಸ್ತೆಯ ಮೇಲಿರುವ ಸಂಚಾರ ದಟ್ಟಣೆ ಒತ್ತಡ ಕಡಿಮೆಯಾಗಲಿದೆ. ಬೆಳಗಾವಿ ದಕ್ಷಿಣ ಭಾಗದ ಜನ ಪಡುತ್ತಿದ್ದ ಬವಣೆ ನೀಗಲಿದೆ.
2017ರ ಅಕ್ಟೋಬರ್ ತಿಂಗಳಲ್ಲಿ ರೈಲ್ವೆ ಮೇಲ್ಸೆತುವೆ ಕಾಮಗಾರಿ ಆರಂಭವಾಗಿತ್ತು. 110 ವರ್, ಹಳೆಯದಾದ ಬ್ರಿಟೀಶ್ ಕಾಲದ ಶಿಥಿಲ ಸೇತುವೆಯನ್ನು ಕೆಡವಿ 20 ಕೋಟಿ ರೂ. ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಲಾಗಿದೆ.
ಇನ್ನು ಸ್ವಲ್ಪ ದಿನದಲ್ಲೇ 3ನೇ ರೈಲ್ವೆ ಗೇಟ್ ಮೇಲ್ಸೆತುವೆ ಕಾಮಗಾರಿ ಆರಂಭವಾಗಲಿದ್ದು, ಆಗ ಪುನಃ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ