Latest

ಕರ್ನಾಟಕದ 21 ಸೇರಿ ಬಿಜೆಪಿಯ 182 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಪ್ರಗತಿವಾಹಿನಿ ಸುದ್ದಿ, ನವದೆಹಲಿ

ಬಿಜೆಪಿಯ 182 ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.

ವಾರಣಾಸಿಯಿಂದ ನರೇಂದ್ರ ಮೋದಿ ಹಾಗೂ ಗುಜರಾತ್ ನ ಗಾಂಧಿನಗರದಿಂದ ಅಮಿತ ಶಹಾ, ಲಕ್ನೌದಿಂದ ರಾಜನಾಥ ಸಿಂಗ್ ಕಣಕ್ಕಿಳಿಯಲಿದ್ದಾರೆ.

ಮಥುರಾದಿಂದ ಹೇಮಮಾಲಿನಿ, ನಾಗ್ಪುರದಿಂದ ನಿತಿನ್ ಗಡ್ಕರಿ, ಅಮೇಥಿಯಿಂದ ಸ್ಮೃತಿ ಇರಾನಿ, ಗಾಜಿಯಾಬಾದ್ ನಿಂದ ವಿ.ಕೆ.ಸಿಂಗ್ ಸ್ಪರ್ಧಿಸಲಿದ್ದಾರೆ.

ಮಹೇಶ್ ಶರ್ಮ: ಗೌತಮ್ ಬುದ್ಧ್ ನಗರ, ಸಾಕ್ಷಿ ಮಹಾರಾಜ್ : ಉನ್ನಾವೋ, ಪೂನಮ್ ಮಹಾಜನ್ : ಮುಂಬೈ ಉತ್ತರ- ಕೇಂದ್ರ, ಜಿತೇಂದ್ರ ಸಿಂಗ್: ಉಧಮ್ ಸಿಂಗ್, ಕೆಜೆ ಆಲ್ಫೋನ್ಸ್ : ಎರ್ನಾಕುಲಂ, ಅರ್ಜುನ್ ಮೇಘವಾಲ್ : ಬಿಕಾನೇರ್, ಸಿಪಿ ರಾಧಾಕೃಷ್ಣನ್ : ಕೊಯಮತ್ತೂರು, , ರಾಧಾಕೃಷ್ಣನ್: ಕನ್ಯಾಕುಮಾರಿ.

ಕರ್ನಾಟಕದ ಹುರಿಯಾಳುಗಳು

ಬೆಳಗಾವಿಯಿಂದ ಸುರೇಶ ಅಂಗಡಿ, ವಿಜಯಪುರದಿಂದ ರಮೇಶ ಜಿಗಜಿಣಗಿ, ಕಲಬುರ್ಗಿ ಉಮೇಶ ಜಾಧವ, ಬಳ್ಳಾರಿ ದೇವೇಂದ್ರಪ್ಪ, ಉತ್ತರ ಕನ್ನಡದಿಂದ ಅನಂತಕುಮಾರ ಹೆಗಡೆ, ಉಡುಪಿ-ಚಿಕ್ಕಮಗಳೂರಿನಿಂದ ಶೋಭಾ ಕರಂದ್ಲಾಚೆ, ಹಾಸನದಿಂದ ಎ.ಮಂಜು, ಚಿತ್ರದುರ್ಗದಿಂದ ನಾರಾಯಣಸ್ವಾಮಿ, ತುಮಕೂರಿನಿಂದ ಜಿ.ಎಸ್.ಬಸವರಾಜ, ಬೆಂಗಳೂರು ಉತ್ತರ ಸದಾನಂದ ಗೌಡ, ಹಾವೇರಿಯಿಂದ ಶಿವಕುಮಾರ ಉದಾಸಿ, ಬೆಂಗಳೂರು ಕೇಂದ್ರ ಪಿ.ಸಿ.ಮೋಹನ್, ಮೈಸೂರು ಪ್ರತಾಪ ಸಿಂಹ, ದಾಣಗೆರೆ ಜಿ.ಎಂ.ಸಿದ್ದೇಶ್ವರ, ಧಾರವಾಡ ಪ್ರಹಲ್ಲಾದ ಜೋಶಿ, ಬಾಗಲಕೋಟೆಯಿಂದ ಪಿ.ಸಿ.ಗದ್ದಿಗೌಡರ್ ಸ್ಪರ್ಧಿಸಲಿದ್ದಾರೆ.

ದಕ್ಷಿಣ ಕನ್ನಡದಿಂದ ನಳೀನ್ ಕುಮಾರ ಕಟಿಲು, ಶಿವಮೊಗ್ಗದಿಂದ ಬಿ.ವೈ.ರಾಘವೇಂದ್ರ, ಚಾಮರಾಜನಗರ ವಿ.ಶ್ರೀನಿವಾಸಪ್ರಸಾದ, ಬೀದರ್ ನಿಂದ ಭಗವಂತ ಖೂಬಾ, ಚಿಕ್ಕಬಳ್ಳಾಪುರದಿಂದ ಬಿ.ಎನ್.ಬಚ್ಚೇಗೌಡ ಕಣಕ್ಕಿಳಿಯಲಿದ್ದಾರೆ.

ಚಿಕ್ಕೋಡಿ ಸೇರಿದಂತೆ 7 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿಲ್ಲ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button