Latest

ಬಿಜೆಪಿ ಗದ್ದಲ: ಉಭಯ ಸದನಗಳ ಕಲಾಪ ಮುಂದೂಡಿಕೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಬಿಜೆಪಿ ಸದಸ್ಯರ ತೀವ್ರ ಗದ್ದಲದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಆರಂಭವಾದ ವಿಧಾನ ಪರಿಷತ್ ಮತ್ತು ವಿಧಾನ ಸಭೆ  ಎರಡರ ಕಲಾಪಗಳನ್ನೂ ಮುಂದೂಡಲಾಗಿದೆ. 

ವಿಧಾನಸಭೆಯಲ್ಲಿ ಸ್ಪೀಕರ್ ರಮೇಶ ಕುಮಾರ ಕಲಾಪ ಆರಂಭಿಸಲು ಪ್ರಯತ್ನ ನಡೆಸಿದರಾದರೂ ಗದ್ದಲ ವಿಕೋಪಕ್ಕೆ ಹೋದ ಹಿನ್ನೆಲೆಯಲ್ಲಿ ಕಲಾಪ ಮುಂದುವರೆಸಲು ಸಾಧ್ಯವಾಗಲಿಲ್ಲ. ಬಾವಿಗಿಳಿದ ಬಿಜೆಪಿ ಸದಸ್ಯರು, ಸರಕಾರ ಬಹುಮತ ಕಳೆದುಕೊಂಡಿದೆ. ಸರಕಾರ ಕೆಳಗಿಳಿಯಲಿ ಎನ್ನುವ ಘೋಷಣೆಯ ಮೂಲಕ ಕಲಾಪಕ್ಕೆ ಅಡ್ಡಿಪಡಿಸಿದರು. ಗದ್ದಲದ ಮಧ್ಯೆಯೇ ಕೆಲವು ಕಾಗದಪತ್ರಗಳನ್ನು ಮಂಡಿಸಲಾಯಿತು. 

ಬಿಜೆಪಿ ಗದ್ದಲಕ್ಕೆ ಪ್ರತಿಯಾಗಿ ದೋಸ್ತಿ ಪಕ್ಷಗಳ ಸದಸ್ಯರೂ ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಅಂತಿಮವಾಗಿ 10 ನಿಮಿಷ ಕಲಾಪ ಮುಂದೂಡಲಾಯಿತು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button