Latest

ಬೆಳಗಾವಿಯಲ್ಲಿ ಕಟ್ಟಿಗೆ ಡಿಪೋಕ್ಕೆ ಬೆಂಕಿ

  ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯ ಅಟೋ ನಗರ ಕೈಗಾರಿಕಾ ಪ್ರದೇಶದಲ್ಲಿ ಕಟ್ಟಿಗೆ ಡಿಪೋ ಒಂದಕ್ಕೆ ಬೆಂಕಿ ತಗುಲಿ ಲಕ್ಷಾಂತರ ರೂ. ಹಾನಿಯಾಗಿದೆ.
ಬುಧವಾರ ಬೆಳಗ್ಗೆ 2.30ರ ವೇಳೆ ಈ ಘಟನೆ ನಡೆದಿದ್ದು, ಸುಮಾರು 2.50 ಲಕ್ಷ ರೂ ಗೂ ಹೆಚ್ಚು ಮೌಲ್ಯದ ಕಟ್ಟಿಗೆ ಸುಟ್ಟು ಹೋಗಿದೆ ಎನ್ನಲಾಗಿದೆ. ಅಗ್ನಿಶಾಮಕ ದಳ ಧಾವಿಸಿ,  ಹೆಚ್ಚಿನ ಅನಾಹುತವಾಗದಂತೆ ತಡೆದಿದ್ದಾರೆ. ಈ ಡಿಪೋ ಮಹ್ಮದ ಮುಲ್ಲಾ ಎನ್ನುವವರಿಗೆ ಸೇರಿದ್ದು, ಬೆಲೆ ಬಾಳುವ ಫರ್ನೀಚರ್ ಕೂಡ ಇತ್ತೆನ್ನಲಾಗಿದೆ. ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button