ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಇಲ್ಲಿಯ ನಿಯತಿ ಫೌಂಡೇಶನ್ ಕೋರೆ ಗಲ್ಲಿಯ ಸನ್ಮಿತ್ರ ಮಹಿಳಾ ಮಂಡಳದ ಸಹಯೋಗದಲ್ಲಿ ಹೋಮ್ ಮಿನಿಸ್ಟರ್ ಕಾರ್ಯಕ್ರಮ ಆಯೋಜಿಸಿತ್ತು.
ಮಹಿಳೆಯರ ಹಕ್ಕು ಮತ್ತು ಜವಾಬ್ದಾರಿಗಳ ಅರಿವು ಮೂಡಿಸುವುದು ನಿಯತಿ ಫೌಂಡೇಶನ್ ಧ್ಯೇಯವಾಗಿದ್ದು, ಹಲವಾರು ವಿದಾಯಕ ಕಾರ್ಯಕ್ರಮಗಳ ಮೂಲಕ ಗುರಿಯತ್ತ ಸಾಗುತ್ತಿದೆ ಎಂದು ನಿಯತಿ ಫೌಂಡೇಶನ್ ಅಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಹೇಳಿದರು.
ವಿವಿಧ ಕಾರ್ಯಕ್ರಮಗಳ ಮೂಲಕ ಬೆಳಗಾವಿಯ ಪ್ರತಿ ಮನೆ ಮನಗಳನ್ನು ತಲುಪುತ್ತಿದ್ದೇವೆ. ಶಿಕ್ಷಣ ಸಂಸ್ಥೆಗಳಲ್ಲೂ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಹೋಮ್ ಮಿನಿಸ್ಟರ್ ಆಗಿ ಶುಭಾಂಗಿ ಜುವೇಕರ್ ಆಯ್ಕೆಯಾದರೆ, ಬೆಸ್ಟ್ ಡ್ರೆಸ್ ಪ್ರಶಸ್ತಿಯನ್ನು ಪೂಜಾ ಶಹಾಪುರಕರ್ ಮತ್ತು ಬೆಸ್ಟ್ ಹೇರ್ ಸ್ಟೈಲ್ ಪ್ರಶಸ್ತಿಯನ್ನು ಪ್ರತಿಭಾ ಪಾವಲೆ ಪಡೆದರು.
ನಿಯತಿ ಫೌಂಡೇಶನ್ ಪದಾಧಿಕಾರಿಗಳಾದ ಮೋನಾಲಿ ಶಹಾ, ಡಾ.ಸಮೀರ್ ಸರ್ನೋಬತ್, ಸೀಮಾ ಸೊಲ್ಲಾಪುರೆ, ಭಾಸ್ಕರ ಪಾಟೀಲ, ಮಿನಲ್ ಶಹಾ, ಕಿಶೋರ ಕಾಕಡೆ ಮೊದಲಾದವರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ