ಬೆಳಗಾವಿ ಜಿಲ್ಲೆಯ ಬಹುತೇಕ ಕಡೆ ಹಾಗೂ ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಸೋಮವಾರ ಸಂಜೆ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ.
ಗುಡುಗು, ಸಿಡಿಲು, ಆನಿಕಲ್ಲು ಸಹಿತ ಗಂಟೆಗೂ ಹೆಚ್ಚು ಸಮಯ ಮಳೆ ಅಬ್ಬರಿಸಿದೆ. ಅನಿರೀಕ್ಷಿತವಾಗಿ ಬಂದ ಮಳೆಯಿಂದಾಗಿ ಜನಜೀವನ ಹಾಗೂ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಎಂ.ಕೆ.ಹುಬ್ಬಳ್ಳಿ ಬಳಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಮರ ಹೊತ್ತಿ ಉರಿದಿದೆ. ಖಾನಾಪುರ ಪಟ್ಟಣದಲ್ಲೂ ಭಾರೀ ಮಳೆಯಾಗಿದೆ.
ಸಂಕೇಶ್ವರದಲ್ಲೂ ಪೊಲೀಸ್ ಠಾಣೆ ಬಳಿ ಮನೆಯೊಂದರ ಮುಂದಿನ ತೆಂಗಿನ ಮರಕ್ಕೆ ಸಿಡಿಲು ಬಡಿದು ಮರ ಸುಟ್ಟು ಕರಕಲಾಗಿದೆ.
ಅನೇಕ ಕಡೆ ಇನ್ನೂ ಮಳೆ ಮುಂದುವರಿದಿದೆ. ಬೆಳಗಾವಿಯಲ್ಲಿ ರಾತ್ರಿಯವರೆಗೂ ವಿದ್ಯುತ್ ಸ್ಥಗಿತವಾಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ