Latest

ಮಕರ ಸಂಕ್ರಾಂತಿಗೆ ಪರಂಪರಾ ಸಂಸ್ಥೆಯಿಂದ ವಿವಿಧ ಸ್ಪರ್ಧೆ

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಪರಂಪರಾ ಬ್ರಾಹ್ಮಣ ಸಂಘಟನೆಯ ವತಿಯಿಂದ ಬೆಳಗಾವಿಯ ಮಹಿಳೆಯರಿಗಾಗಿ ಜ.೧೨ರಂದು ಪಾರಂಪರಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. 
ಸಿಹಿಎಳ್ಳಿನಿಂದ ಆಭರಣ ತಯಾರಿಕೆ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಇದರಲ್ಲಿ ಬೇಕಾಗುವ ಎಲ್ಲಾ ಸಾಮಾಗ್ರಿಗಳನ್ನು ಸ್ಪರ್ಧೆಗಳೇ ತರಬೇಕಾಗಿದೆ. ಸಿಹಿಎಳ್ಳಿನಿಂದ ಎರಡು ತರದ ಆಭರಣಗಳನ್ನು ಸ್ಪರ್ಧಾರ್ಥಿಗಳು ಒಂದು ತಾಸಿನಲ್ಲಿ ಸಿದ್ಧಪಡಿಸಬೇಕಾಗಿರುತ್ತದೆ. ಕಿರೀಟ, ಬಾಜುಬಂಧ, ನೆಕ್ಲೇಸ್, ಸೊಂಟದ ಪಟ್ಟಿ.. ಹೀಗೆ ಯಾವುದಾದರೂ ಎರಡು ಆಭರಣಗಳನ್ನು ಸಿದ್ಧಮಾಡಿ ತೋರಿಸಬೇಕು. ಈ ಆಭರಣ ತಯಾರಿಗೆ ಬೇಕಾಗುವ ಸಲಕರಣೆಗಳು ಹಾಗೂ ಪ್ರಾಥಮಿಕ ತಯಾರಿಯನ್ನು ಮನೆಯಲ್ಲಿಯೇ ಮಾಡಿ ತರಲು ಅವಕಾಶವಿದೆ. 
ಎರಡನೇ ಸ್ಪರ್ಧೆಯಾಗಿ ಮನೆಯಿಂದಲೇ ಸಿದ್ಧಪಡಿಸಿ ತರುವ ಸಿಹಿ ಖಾದ್ಯವನ್ನು ಸ್ಪರ್ಧಾಂಗಣದಲ್ಲಿ ಪ್ರದರ್ಶನ ಮಾಡುವ ಸ್ಪರ್ಧೆ ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ಸಿದ್ಧಪಡಿಸುವ ಖಾದ್ಯಗಳಲ್ಲಿ ಕಡ್ಡಾಯವಾಗಿ ಶೇಂಗಾ, ಎಳ್ಳು, ಬೆಲ್ಲ ಮೊದಲಾದವುಗಳ ಬಳಕೆ ಮಾಡಬೇಕಾಗುತ್ತದೆ. ಆಸಕ್ತರು ಜ.೧೦ರ ಒಳಗಾಗಿ ಪರಂಪರಾ ಬ್ರಾಹ್ಮಣ ಸಮಾಜದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. 
ಡ್ರೆಸ್ ಕೋಡ್ ಕರಿಬಣ್ಣದ ಸೀರೆ ಇದ್ದು, ಸ್ಥಳದಲ್ಲಿಯೇ ಹೆಸರು ನೋಂದಾವಣಿಗೆ ಅವಕಾಶವಿದೆ. 
ಜ.೧೨ರ ಸಂಜೆ ೪ರಿಂದ ೫ ಗಂಟೆಯ ತನಕ ಸ್ಪರ್ಧೆ ಏರ್ಪಡಿಸಲಾಗುತ್ತಿದ್ದು, ಆಸಕ್ತರು ಹೆಚ್ಚಿನ ಮಾಹಿತಿಗೆ ಅರ್ಚನಾ ತೆಲಂಗ್-೯೪೪೮೩೩೩೦೩೦, ವಾಣಿ ಜೋಶಿ-೭೪೦೬೧೮೦೮೦೯, ಪ್ರತಿಮಾ ನಾಯಕ್-೭೦೧೯೬೮೯೭೪೫ ಈ ಸಂಖ್ಯೆಯಲ್ಲಿ ಸಂಪರ್ಕಿಸಿ ಹೆಸರು ನೋಂದಾಯಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button