ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ನಗರ ಪೊಲೀಸರು ವಿವಿಧೆೆಡೆ ಮಟಕಾ ಅಡ್ಡೆಗಳ ಮೇಲೆ ದಾಳಿ ನಡೆಸಿ ಒಟ್ಟೂ 11 ಜನರನ್ನು ಬಂಧಿಸಿದ್ದು, 70 ಸಾವಿರ ರೂ. ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ಖಡೇಬಜಾರ ಪೊಲೀಸ್ ಠಾಣೆ ವ್ಯಾಪ್ತಿಯ ಕಚೇರಿ ರೋಡ್ ಎಸ್.ಎನ್ ಪಾಟೀಲ ಬಿರ್ಲಾ ಶಕ್ತಿ ಸಿಮೆಂಟ್ ಅಂಗಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಫಯೂಮ ಕೊತ್ವಾಲ ಎಂಬ ಬುಕ್ಕಿ ಮತ್ತು ಅವನೊಂದಿಗೆ ಅಶೋಕ ಹಂಪಣ್ಣವರ, ಆಫ್ಜಲ ಅನ್ವರ ಪಠಾಣ ಎಂಬುವವರು ಓಸಿ ಕಲ್ಯಾಣ ಮಟಕಾ ಆಟದಲ್ಲಿ ತೊಡಗಿದ್ದಾಗ ಎಸಿಪಿ ಮಹಾಂತೇಶ್ವರ ಜಿದ್ದಿ ಮತ್ತು ಸಿಬ್ಬಂದಿಗಳಾದ ಐ.ಎಸ್ ಪಾಟೀಲ, ಜಿ.ಎಮ್. ಬಡಿಗೇರ, ಶಿವಲಿಂಗ ಬಿ ಪಾಟೀಲ, ಎಸ್. ಎಸ್ ಬಾಗಲಕೋಟ ಹಾಗೂ ಜೀಪ್ ಚಾಲಕ ಆರ್.ಜಿ ಗುಂಡಿ ದಾಳಿ ನಡೆಸಿ, ಮೂವರನ್ನು ವಶಪಡಿಸಿಕೊಂಡು, 36,680 ರೂ. ಜಪ್ತು ಮಾಡಿದ್ದಾರೆ.
ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಖಂಜರ ಗಲ್ಲಿಯ ಕೆಇಬಿ ಕಛೇರಿ ಹಿಂದೆ ಸಾರ್ವಜನಿಕ ರಸ್ತೆ ಮೇಲೆ ಓಸಿ ಅಂಕಿ ಚೀಟಿಗಳನ್ನು ಬರೆದು ಕೊಡುತ್ತಿದ್ದ ಮಾಹಿತಿ ಮೇಲೆ ಎಸಿಪಿ ಮಹಾಂತೇಶ್ವರ ಜಿದ್ದಿ ಆರ್.ಸಿ ಕಂಬಾರ ಪಿಎಸ್‌ಐ (ಅಪರಾಧ ವಿಭಾಗ) ಮತ್ತು ಅವರ ಅಧೀನ ಸಿಬ್ಬಂದಿಗಳಾದ ಅನೀಲ ಎಲ್ ಪಾಟೀಲ, ರವಿ ದುರ್ಗಿ ದಾಳಿ ಮಾಡಿ, ಟಿವಿ ಸೆಂಟರ್ ನ 72 ವರ್ಷದ ಜಾನ ತಂದೆ ಅಂಟೋನಿ ಫರ್ನಾಂಡಿಸ್ ನನ್ನು ವಶಪಡಿಸಿಕೊಂಡು ಅವನಿಂದ 3070 ರೂ. ನಗದು ಹಾಗೂ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಯಿತು. ಖಂಜರಗಲ್ಲಿಯ ಇಜಾರೆ ಹಾಗೂ ಶಫೀ ತಹಶೀಲ್ದಾರ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಅವರೆಲ್ಲರ ವಿರುದ್ಧ ಮಾರ್ಕೆಟ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹೊನಗಾ ಗ್ರಾಮದ ಬಸ್ ಸ್ಟಾಪ್ ಹತ್ತಿರ ಸರ್ವೀಸ್ ರಸ್ತೆಯ ಬದಿಗೆ ಸಾರ್ವಜನಿಕ ಸ್ಥಳದಲ್ಲಿ ಬೈರು ಅಪ್ಪಯ್ಯಾ ನಾಯಿಕ ಸಾರ್ವಜನಿಕರಿಂದ ಹಣ ಹಚ್ಚಿಸಿಕೊಂಡು ಓಸಿ ಮಟಕಾ ಆಟ ಆಡಿಸುತ್ತಿದ್ದ ಬಗ್ಗೆ ಖಚಿತವಾದ ಮಾಹಿತಿ ಮೇರೆಗೆ ಎಸಿಪಿ ಮಹಾಂತೇಶ್ವರ ಜಿದ್ದಿ ಮಾರ್ಗದರ್ಶನದಲ್ಲಿಇನಸ್ಪೆಕ್ಟರ್ ಜಿ ಐ ಕಲ್ಯಾಣಶೆಟ್ಟಿ ಮತ್ತು ಸಿಬ್ಬಂದಿಯಾದ ಹೆಚ್ ಎಸ್. ನಿಸ್ಸುನ್ನವರ, ಎಸ್ ಎಂ ಭಜಂತ್ರಿ ಮತ್ತು ಯಾಸೀನ ನಧಾಪ ಹಾಗೂ ಕಾಕತಿ ಠಾಣೆಯ ಪಿಎಸ್‌ಐ ಮತ್ತು ಸಿಬ್ಬಂದಿ ತಂಡ ದಾಳಿ ಮಾಡಿ ಒಟ್ಟು 7 ಜನರನ್ನು ವಶಕ್ಕೆ ಪಡೆದುಕೊಂಡಿದೆ. ರಾಜು ಯಲ್ಲಪ್ಪ ನಾಯಿಕ, ಯುವರಾಜ ಲಗಮಣ್ಣಾ ನಾಯಿಕ, ಸಚೀನ ಯಲ್ಲಪ್ಪ ಪಾಟೀಲ, ಅಲ್ತಾಪ ಹುಸೇನಸಾಬ ಬೇಪಾಡಿ, ನಾಗೇಶ ಶೆಟ್ಟು ನಾಯಿಕ, ಯಲ್ಲಪ್ಪಾ ಲುಮಣ್ಣಾ ಹುಂದ್ರೆ, ಹುಸೇನಸಾಬ ಮೌಲಾಸಾಬ ಸಯ್ಯದ ಅವರನ್ನು ಬಂಧಿಸಲಾಗಿದ್ದು, ಮುಖ್ಯ ಆರೋಪಿ ಬೈರು ಅಪ್ಪಯ್ಯಾ ನಾಯಿಕ ಓಡಿ ಹೋಗಿದ್ದಾನೆ. ಈ ಬಗ್ಗೆ ಎಲ್ಲ 8 ಜನರ ಮೇಲೆ ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಪೊಲೀಸ್ ಆಯುಕ್ತರು, ಇಬ್ಬರು ಡಿಸಿಪಿಗಳ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಎಸಿಪಿ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.




